Wednesday, August 10, 2022

Latest Posts

ಗಣೇಶ ಚತುರ್ಥಿ ದಿನ ಚಂದ್ರನನ್ನು ಏಕೆ ನೋಡಬಾರದು?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ಗಣೇಶ ಚತುರ್ಥಿ. ನಿಮ್ಮ ಮನೆಯಲ್ಲೂ ಹಿರಿಯರು ಇಂದು ಚಂದ್ರನನ್ನು ನೋಡಬಾರದು, ಅಪ್ಪಿತಪ್ಪಿ ನೋಡಿದರೆ ಕಳಂಕ ತಪ್ಪಿದ್ದಲ್ಲ ಎಂದಿರಬಹುದು. ಇದು ನಿಜವೇ? ಅಷ್ಟಕ್ಕೂ ನಮ್ಮ ಹಿರಿಯರು ಯಾವ ಆಧಾರದ ಮೇಲೆ ಈ ರೀತಿ ಹೇಳುತ್ತಿರಬಹುದು? ಈ ಕೆಳಗಿನ ಕತೆ ಓದಿದರೆ ನಿಮಗೆ ತಿಳಿಯುತ್ತದೆ.

ಒಮ್ಮೆ ಗಣಪತಿ ಎಲ್ಲ ಭಕ್ತರ ಮನೆಯಲ್ಲಿಯೂ ಹಬ್ಬದ ಅಡುಗೆ ಊಟ ಮಾಡಿಕೊಂಡು, ನಂತರ ಇಲಿಯ ಮೇಲೆ ಕುಳಿತು ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಹಾವನ್ನು ಕಂಡು ಇಲಿ ಬೆದರಿ ಓಡಿ ಹೋಗಿ ಗಣಪನನ್ನು ಬೀಳಿಸಿತು. ಗಣಪತಿ ಬಿದ್ದ ರಭಸಕ್ಕೆ ದಂತ ಮುರಿ, ಹೊಟ್ಟೆ ಒಡೆದು ಹೋಯಿತು. ಖರ್ಜಿಕಾಯಿ, ಮೋದಕ ,ಚಕ್ಕುಲಿ, ಪಾಯಸ, ಕಡುಬು, ಉಂಡೆ, ಪಂಚಕಜ್ಜಾಯ ಎಲ್ಲ ನೆಲಕ್ಕೆ ಬಿತ್ತು.

ತಕ್ಷಣ ಗಣಪತಿ ಅಲ್ಲೆ ಇದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡು ನೆಲಕ್ಕೆ ಬಿದ್ದ  ಆಹಾರವನ್ನು ಮತ್ತೆ ಸಂಗ್ರಹಿ ಹೊಟ್ಟೆಗೆ ತುಂಬುಕೊಳ್ಳುತ್ತಿದ್ದ. ಇವೆಲ್ಲವನ್ನೂ ಮೇಲಿದ್ದ ಚಂದ್ರದೇವ ನೋಡುತ್ತಿದ್ದ. ಗಣಪತಿಯ ಅವಸ್ಥೆ ನೋಡಿ ಚಂದ್ರ ಗೇಲಿ ಮಾಡಿಕೊಂಡು ನಕ್ಕಿದ.

ಇದರಿಂದ ಕೋಪಗೊಂಡ ಗಣಪತಿ ಚಂದ್ರದೇವನು ಕ್ಷೀಣಿಸುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ.  ತನಗೆ ದೊರೆತೆ ಈ ಭೀಕರ ಶಾಪವನ್ನು ಎಂದೂ ನಿರೀಕ್ಷಿಸದಿದ್ದ ಚಂದ್ರದೆವನ ಅಹಂಕಾರವೆಲ್ಲಾ ಥಟ್ಟನೇ ಇಳಿದು ಚಿಂತಾಕ್ರಾಂತನಾದ. ಈ ಶಾಪದಿಂದಾಗಿ ಇದುವರೆಗೂ ತನ್ನ ಸೌಂದರ್ಯದ ಬಗ್ಗೆ ಹೊಂದಿದ್ದ ಬಿಗುಮಾನವೆಲ್ಲಾ ಚಂದ್ರದೇವನಿಗೆ ಕಳೆದುಹೋಗುತ್ತದೆ.

ಚಂದ್ರದೇವನಿಗೆ ತನ್ನ ತಪ್ಪಿನ ಅರಿವಾಗಿ ಗಣಪತಿಯಲ್ಲಿ ಶಾಪವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಆದರೆ ನಾನು ನೀಡಿದ ಶಾಪವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ಶಾಪದ ಪ್ರಭಾವವನ್ನು ಕಡೆಮೆ ಮಾಡಬಹುದು ಎಂದು ಗಣಪತಿ ಹೇಳುತ್ತಾನೆ.

ಅದರಂತೆ  ತಿಂಗಳಿಗೊಮ್ಮೆ ನಿಮ್ಮ ಅಂದ ಹಾಳಾಗುವಂತೆ ಶಾಪದ ಪ್ರಭಾವ ಕಡಿಮೆ ಮಾಡಬಹುದು. ಆದರೆ ನಂತರ ಕ್ರಮೇಣ ನಿನ್ನ ಗಾತ್ರವು ಪ್ರತಿ ದಿನ ಹೆಚ್ಚಾಗುತ್ತದೆ ಮತ್ತು ತಿಂಗಳಿಗೊಮ್ಮೆ ನೀನು ಪೂರ್ಣ ರೂಪದಲ್ಲಿ ಕಾಣಿಸಿಕೊಳ್ಳಿವೆ. ಜನರು ಯಾವಾಗಲೂ ನಿಮ್ಮನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ಯಾರು ಚಂದ್ರನನ್ನು ನೋಡುತ್ತಾರೋ ಅವರು ಕಳ್ಳನ ಪಟ್ಟವನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss