spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಏಕೆ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸುವುದಿಲ್ಲ?

- Advertisement -Nitte

ನೀವು ಎಲ್ಲಿಯಾದರೂ ಸೃಷ್ಟಿ ಕರ್ತ ಬ್ರಹ್ಮನಿಗೆ ಪೂಜೆ ಮಾಡುವುದು ನೋಡಿದ್ದೀರಾ? ನೋಡಿರಲಿಕ್ಕೆ ಸಾಧ್ಯವೇ ಇಲ್ಲ.  ಏಕೆಂದರೆ  ನಮ್ಮಲ್ಲಿ ಎಲ್ಲಾ ದೇವ/ ದೇವತೆಗಳಿಗೂ ಪೂಜೆಯನ್ನು ಮಾಡಲಾಗುತ್ತದೆ ಆದರೆ ಸೃಷ್ಟಿಕರ್ತ ಬ್ರಹ್ಮನಿಗೆ ಮಾತ್ರ ಯಾವ ಪೂಜೆಯನ್ನು ಮಾಡುವುದಿಲ್ಲ. ಏಕೆ ಗೊತ್ತಾ?

ಇದು ಪೌರಾಣಿಕ ಕತೆಗೆ ಆಧಾರವಾಗಿದೆ. ಇದರ ಪ್ರಕಾರ,  ಒಮ್ಮೆ ವಿಷ್ಣು ಮತ್ತು ಬ್ರಹ್ಮನಿಗೆ ತಮ್ಮ ನಡುವೆ ಯಾರು ಶ್ರೇಷ್ಠ ಎಂಬ ಬಗ್ಗೆ ಚರ್ಚೆಯಾಗುತ್ತಿರುತ್ತದೆ. ಆದರೆ ಉತ್ತರ ಸಿಗದಿದ್ದಾಗ ಶಿವನಲ್ಲಿ ಕೇಳುತ್ತಾರೆ. ಆಗ  ಶಿವ ತನ್ನ ತಲೆಯನ್ನು ಯಾರು ಮೊದಲು ನೋಡುತ್ತಾರೋ ಅವರೇ ಶ್ರೇಷ್ಠ ಎಂಬುದಾಗಿ ತಿಳಿಸುತ್ತಾನೆ. ಇದಕ್ಕಾಗಿ ಶಿವನು ಲಿಂಗ ರೂಪವನ್ನು ಧರಿಸುತ್ತಾನೆ ಮತ್ತು ವಿಶ್ವವನ್ನೂ ಮೀರಿ ಬೆಳೆಯುತ್ತಾನೆ.

ಇದು ಅಷ್ಟು ಸುಲಭವಲ್ಲವೆಂಬುದು ತಿಳಿದು ವಿಷ್ಣುವು ಶಿವನನ್ನು ಪ್ರಾರ್ಥಿಸಿ ಅವರ ಪಾದಕ್ಕೆ ಎರಗಿ ಶಿವನನ್ನು ಒಲಿಸಿಕೊಳ್ಳುತ್ತಾನೆ. ಅವರನನ್ನಯ ಮೇಲಕ್ಕೆತ್ತಲು ಶಿವನು ತಲೆಬಾಗುತ್ತಾನೆ. ಆಗ ವಿ‍ಷ್ಣುವು ಪಂದ್ಯದಲ್ಲಿ ಗೆಲ್ಲುತ್ತಾರೆ.

ಆದರೆ ಬ್ರಹ್ಮನು ಕುಟಿಲ ಮಾರ್ಗದಿಂದ ಪಂದ್ಯದಲ್ಲಿ ಗೆಲ್ಲಲು ಮುಂದಾಗುತ್ತಾನೆ. ಕೇತಕಿ ಹೂವಿಗೆ ತನಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ. ಕೇತಕಿ ಹೂವಿಗೆ ತಾನು ಶಿವನ ತಲೆಯನ್ನು ಕಂಡಿದ್ದೇನೆಂದು ಸುಳ್ಳು ಹೇಳುವಂತೆ ಹೇಳಿ ಕಳುಹಿಸುತ್ತಾನೆ. ಹೀಗೆಯೇ ಹೂವು ಶಿವನಲ್ಲಿ ಸುಳ್ಳು ಹೇಳುತ್ತದೆ. ಸುಳ್ಳಿನಿಂದ ಕೋಪಗೊಂಡ ಶಿವ ಯಾರೂ ಬ್ರಹ್ಮನನ್ನು ಪೂಜಿಸಬಾರದು ಎಂದು ಶಾಪಕೊಡುತ್ತಾನೆ ಹಾಗೆಯೇ ಕೇತಕಿ ಹೂವನ್ನು ಯಾರೂ ಪೂಜೆಗೆ ಬಳಸಬಾರದು ಎಂಬುದಾಗಿಯೂ ಹೇಳುತ್ತಾನೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss