Wednesday, June 29, 2022

Latest Posts

45ಕ್ಕೂ ಹೆಚ್ಚಿನ ದೇಶಗಳಲ್ಲಿ ಪೆಗಾಸಸ್​ ಬಳಕೆ, ಭಾರತ ಮಾತ್ರ ಟಾರ್ಗೆಟ್ ಏಕೆ?: ರವಿಶಂಕರ್ ಪ್ರಸಾದ್​

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್​ ಮೂಲದ ಪೆಗಾಸಸ್​​ ಎಂಬ ಸ್ಪೈವೇರ್​ ಅಪ್ಲಿಕೇಶನ್​ ಮೂಲಕ ಕೇಂದ್ರ ಸರ್ಕಾರ ಕೆಲವರ ಮೊಬೈಲ್​ ಹ್ಯಾಕ್​ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಆದರೆ ಕಾಂಗ್ರೆಸ್​​ ಆರೋಪವನ್ನು ಬಿಜೆಪಿ ಸಂಪೂರ್ಣವಾಗಿ ತಳ್ಳಿ ಹಾಕಿದೆ.
ಸುದ್ದಿಗೋಷ್ಠಿ ನಡೆಸಿರುವ ಕೇಂದ್ರದ ಮಾಜಿ ಐಟಿ ಸಚಿವ ರವಿಶಂಕರ್ ಪ್ರಸಾದ್​, 45ಕ್ಕೂ ಹೆಚ್ಚಿನ ದೇಶಗಳು ಪೆಗಾಸಸ್​ ಬಳಕೆ ಮಾಡುತ್ತಿರುವಾಗ ಭಾರತವನ್ನು ಮಾತ್ರ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂಗಾರು ಅಧಿವೇಶನ ಆರಂಭಗೊಳ್ಳುವುದಕ್ಕೂ ಕೆಲ ನಿಮಿಷಗಳ ಮುಂಚೆ ಈ ಸುದ್ದಿ ಬಹಿರಂಗಗೊಂಡಿದೆ. ಇದರ ಹಿಂದಿರುವ ಹುನ್ನಾರ ಏನು? ಎಂದು ಪ್ರಶ್ನೆ ಮಾಡಿರುವ ರವಿಶಂಕರ್ ಪ್ರಸಾದ್​, ಲೋಕಸಭೆ ಸದನ ನಡೆಸಲು ಅವಕಾಶ ನೀಡುವ ಬದಲು ಇಂತಹ ಸುಳ್ಳು ವರದಿಯನ್ನಿಟ್ಟುಕೊಂಡು ಪ್ರತಿಭಟನೆ ಮಾಡ್ತಿವೆ ಎಂದಿದ್ದಾರೆ. ಅವರ ಬಳಿ ಯಾವುದೇ ರೀತಿಯ ಸಾಕ್ಷ್ಯಗಳಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪೆಗಾಸಸ್ ಈಗಾಗಲೇ ಸ್ಪಷ್ಟನೆ ಸಹ ನೀಡಿದ್ದು, ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ಉದ್ದೇಶದಿಂದ ಕಾಂಗ್ರೆಸ್​ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಕೀಳು ಮಟ್ಟದಲ್ಲಿ ನಾವಿಲ್ಲ
ಕಾಂಗ್ರೆಸ್​ ಆರೋಪ ಮಾಡಿರುವ ಪ್ರಕಾರ ರಾಹುಲ್​ ಗಾಂಧಿ, ಪ್ರಶಾಂತ್ ಕಿಶೋರ್ ಸೇರಿದಂತೆ 40ಕ್ಕೂ ಹೆಚ್ಚು ಪತ್ರಕರ್ತರ ಪೋನ್ ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಆರೋಪವನ್ನ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಇ
ದೇ ವಿಷಯವನ್ನಿಟ್ಟುಕೊಂಡು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೋದಿ ನೇತೃತ್ವದ ಸರ್ಕಾರ ದೇಶದ ಹಿತಾಸಕ್ತಿಗೋಸ್ಕರ ಕೆಲಸ ಮಾಡ್ತಿದ್ದು, ಫೋನ್ ಟ್ಯಾಪಿಂಗ್ ಮಾಡುವಂತಹ ಕೀಳು ಮಟ್ಟದಲ್ಲಿ ನಾವಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss