Sunday, April 18, 2021

Latest Posts

ತುಳಸಿ ಗಿಡ, ಅಶ್ವತ್ಥ ಮರಕ್ಕೆ ಏಕೆ ದಿನವೂ ಪ್ರದಕ್ಷಿಣೆ ಹಾಕಬೇಕು?

ಅಮ್ಮ ದಿನವೂ ಬೆಳಗ್ಗೆ ತುಳಸಿ ಗಿಡಕ್ಕೆ, ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತಾಳೆ. ಏನಕ್ಕೆ ಬೆಳ್ ಬೆಳಗ್ಗೆ ಈ ರೀತಿ ಗಿಡಕ್ಕೆಲ್ಲ ಸುತ್ತತಿದಿಯಾ ಅಂದ್ರೆ, “ಬಾಯ್ ಮೇಲೆ ಹೊಡಿತಿನಿ, ದೇವರ ವಿಷಯದಲ್ಲಿ ತಮಾಷೆ ಬೇಡ, ಸುಮ್ಮನೆ ನೀನು ಪ್ರದಕ್ಷಿಣೆ ಹಾಕು” ಅಂತಾಳೆ “ಅಶ್ವತ್ಥ ಮರ, ತುಳಸಿ ಗಿಡ ಪ್ರದಕ್ಷಿಣೆ ಹಾಕಿದ್ರೆ ಸುಖ, ಸಂಪತ್ತು ವೃದ್ಧಿಯಾಗುತ್ತೆ. ನಿಮ್ಮ ಅಜ್ಜ ಯಾವಾಗಲೂ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕ್ತಿದ್ದ ಅದಕ್ಕೆ 95 ವರ್ಷ ಯಾವ ಕೊರತೆ ಇಲ್ದೆ ರಾಜನ ಹಾಗೇ ಬದಿಕಿದ್ದು” ಅಂತಾಳೆ.

ಅಶ್ವತ್ಥ ಮರ, ತುಳಸಿ ಗಿಡ ಸುತ್ತಿದ್ರೆ ಸುಖ, ಸಂಪತ್ತು ಸಿಗತ್ತೆ ಅಂತಿದ್ರೆ ಯಾರು ಬೇರೆ ಕೆಲಸಕ್ಕೆ ಹೋಗ್ತಿರಲಿಲ್ಲ. ಮರ, ಗಿಡ ಸುತ್ತೋದೆ ಕೆಲಸ ಮಾಡ್ಕೋತಿದ್ರು ಅಲ್ವಾ? ಆದರೆ ಅಶ್ವತ್ಥ ಮರ, ತುಳಸಿ ಗಿಡ ಪ್ರದಕ್ಷಿಣೆ ಹಾಕಿದ್ರೆ ಲಾಸ್ ಇಲ್ಲ. ಲಾಭ ಖಂಡಿತ ಇದೆ…

ತುಳಸಿ ಗಿಡ ಮತ್ತು ಅಶ್ವತ್ಥ ಮರ ಯಥೇಚ್ಛವಾಗಿ ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತವೆ. ಪ್ರತಿ ದಿನ ಅದಕ್ಕೆ ಪ್ರದಕ್ಷಿಣೆ ಹಾಕಿದ್ರೆ ಆರೋಗ್ಯ ವೃದ್ಧಿಯಾಗುತ್ತದೆ. ಇದೇ ಕಾರಣಕ್ಕಾಗಿಯೇ ನಮ್ಮ ಪೂರ್ವಜರು ತುಳಸಿ ಗಿಡ ಮತ್ತು ಅಶ್ವತ್ಥ ಮರಕ್ಕೆ ಬೆಳಗ್ಗೆ ಪ್ರದಕ್ಷಿಣೆ ಹಾಕುವುದಕ್ಕೆ ಹೇಳೋದು. ಆರೋಗ್ಯ ವೃದ್ಧಿಯಾಗತ್ತೆ ಅಂದ್ರೆ ಯಾರೂ ಇದನ್ನು ಮಾಡುವುದಿಲ್ಲ. ಅದೇ ಸಂಪತ್ತು ವೃದ್ಧಿಯಾಗತ್ತೆ ಅಂದ್ರೆ ಎಲ್ಲರೂ ಮಾಡುತ್ತಾರೆ. ನಮ್ಮ ಗುಟ್ಟು ಹಿರಿಯರಿಗೆ ಮೊದಲೇ ಗೊತ್ತಿತ್ತು ಅಲ್ವಾ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss