ಇರಾನ್‌ನಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗೋದನ್ನು ತಡೆಯೋಕೆ ಇಂಥಾ ನೀಚ ಕೆಲಸ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಲೆಯಿಲ್ಲ. ಅವರು ಶಾಲೆಗೆ ಹೋಗುವುದನ್ನು ಕಡೆಗಣಿಸಲಾಗುತ್ತದೆ. ಶಾಲೆಗೆ ಅವರೇ ಹೋಗದಂತೆ ತಡೆಗಟ್ಟಲು ಹೆಣ್ಣುಮಕ್ಕಳಿಗೆ ವಿಷ ಹಾಕಲಾಗಿದೆ.

ಇರಾನ್‌ನ ಖೋಂ ನಗರದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗದಂತೆ ತಡೆಯಲು ಸಣ್ಣ ಪ್ರಮಾಣದ ವಿಷ ಹಾಕಲಾಗಿದೆ. ತೀವ್ರ ಉಸಿರಾಟದ ತೊಂದರೆಯನ್ನು ಹೆಣ್ಣುಮಕ್ಕಳು ಅನುಭವಿಸುತ್ತಿದ್ದು, ವೈದ್ಯರು ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಇದಕ್ಕೆ ಸಣ್ಣ ಪ್ರಮಾಣದಲ್ಲಿ ವಿಷ ಹಾಕುತ್ತಿರುವುದೇ ಕಾರಣ ಎಂದಿದ್ದಾರೆ. ಖೋಂ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ವಿಷ ನೀಡಲಾಗಿದೆ. ಅಲ್ಲದೆ ಹೆಣ್ಣುಮಕ್ಕಳ ಶಾಲೆಗಳನ್ನು ಮುಚ್ಚುವಂತೆ ಹಲವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!