ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯ ಮುಂದೆ ರಂಗೋಲಿ ಏಕೆ ಹಾಕುತ್ತಾರೆ?

ಮನೆಯ ಮುಂದೆ ರಂಗೋಲಿ ಹಾಕುವುದು ಭಾರತೀಯರ ಬಹಳ ಹಳೆಯ ಸಂಪ್ರದಾಯ. ಆಗಿನ ಕಾಲದಲ್ಲಿ ರಂಗೋಲಿಯನ್ನು ಪದ್ಧತಿ ಪ್ರಕಾರವೇ ಹಾಕಲಾಗುತ್ತಿತ್ತು. ಗೃಹಿಣಿಯರು ಬೆಳಗ್ಗೆ ಬೇಗ ಎದ್ದು, ಗುಡಿಸಿ, ಸಗಣಿಯಿಂದ ಸಾರಿಸಿ ನಂತರ ಅಕ್ಕಿ ಹಿಟ್ಟಿನಿಂದ ರಂಗೋಲಿ ಹಾಕುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಸಗಣಿಯಿಂದ ಸಾರಿಸಿ, ರಂಗೋಲಿ ಹಾಕುವುದು ಹಾಗಿರಲಿ, ರಂಗೋಲಿ ಹಾಕುವವರ ಸಂಖ್ಯೆಯೇ ಕಡಿಮೆ ಆಗಿದೆ.

ಏಕೆ ಮನೆಯ ಮುಂದೆ ರಂಗೋಲಿ ಹಾಕಬೇಕು ಎನ್ನುತ್ತಾರೆ?.. ಇದಕ್ಕೆ ವೈಜ್ಞಾನಿಕ ಕಾರಣಗಳಿವೆ… ರಂಗೋಲಿಯನ್ನು ಹಾಕುವುದರಿಂದ ಅದರಲ್ಲಿ ತರಂಗದಂತೆ ಹರಿದಿರುವ ರೇಖೆಗಳು ಮನೆಯನ್ನು ಪ್ರವೇಶಿಸುವವನ ಮನಸ್ಸನ್ನು ಶಾಂತಗೊಳಿಸುತ್ತದೆ. ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಸಂತೋಷದ ನರಗಳನ್ನು ಪ್ರಚೋದಿಸುತ್ತದೆ. ಇದಕ್ಕಾಗಿ ಮನೆಯ ಮುಂದೆ ರಂಗೋಲಿ ಹಾಕಬೇಕು ಎನ್ನುತ್ತಾರೆ.

ಈಗ ಕಲ್ಲಿನ ಪುಡಿಯಿಂದ ರಂಗೋಲಿ ಹಾಕಿದರೆ ಹಳೆ ಕಾಲದಲ್ಲಿ ಅಕ್ಕಿ ಹಿಟ್ಟಿನಿಂದ ಹಾಕುತ್ತಿದ್ದರು. ಇರುವೆಗಳಿಗೆ ಆಹಾರವಾಗಲಿ ಎಂಬ ಕಾರಣಕ್ಕೆ ಅಕ್ಕಿ ಹಿಟ್ಟಿನಿಂದ ಹಾಕುತ್ತಿದ್ದರು.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss