Tuesday, June 28, 2022

Latest Posts

ಇನ್ನೂ ರಾಹುಲ್ ಗಾಂಧಿ ಏಕೆ ಕೊರೋನಾ ಲಸಿಕೆ ಪಡೆದಿಲ್ಲ: ಸಚಿವ ರವಿ ಶಂಕರ್ ಪ್ರಸಾದ್ ಪ್ರಶ್ನೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇದುವರೆಗೂ ರಾಹುಲ್ ಗಾಂಧಿ ಅವರು ಏಕೆ ಕೊರೋನಾ ಲಸಿಕೆ ಡೋಸ್​ ಪಡೆದಿಲ್ಲ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿನಡೆಸಿದ ರವಿ ಶಂಕರ್ ಪ್ರಸಾದ್, ಭಾರತದಲ್ಲಿ ಲಸಿಕೆಯ ಲಭ್ಯತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ರಾಹುಲ್ ಗಾಂಧಿ ಅವರಿಗೆ ಗಮನ ಕೇಂದ್ರೀಕರಿಸುವ ಸಮಸ್ಯೆ ಇದೆ ಎಂದರು.
ಇಂದು ಪ್ರಧಾನಿ ಮೋದಿ ಅವರಿಗೆ ರಾಹುಲ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ದೇಶದಲ್ಲಿರುವ ಎಲ್ಲರಿಗೂ ವಯಸ್ಸಿನ ಮಿತಿ ತೆಗೆದುಹಾಕಿ ಅರ್ಹರಿಗೆ ಲಸಿಕೆ ನೀಡುವಂತೆ ಹೇಳಿದ್ದಾರೆ. ಆದರೆ ಇದುವರೆಗೂ ರಾಹುಲ್ ಗಾಂಧಿ ಏಕೆ ಲಸಿಕೆ ಪಡೆದುಕೊಂಡಿಲ್ಲ ಅಥವಾ ವಿದೇಶ ಪ್ರವಾಸದ ಸಂದರ್ಭದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆಯೇ? ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಲಸಿಕೆ ಅಭಿಯಾನ ವೇಗ ಪಡೆದಿಲ್ಲ. ಆದ್ದರಿಂದ ಅವರು ಮೋದಿಗೆ ಪತ್ರ ಬರೆಯುವ ಬದಲು ಅವರ ಪಕ್ಷದ ರಾಜ್ಯ ನಾಯಕರಿಗೆ ಪತ್ರ ಬರೆಯಬಹುದಿತ್ತು. ಆ ಮೂಲಕ ಜನರ ಆರೋಗ್ಯದ ಚಿಂತನೆ ನಡೆಸಬೇಕಿದೆ. ರಾಹುಲ್ ಗಾಂಧಿ ಅವರು ವಿದೇಶಿ ಫಾರ್ಮಾ ಸಂಸ್ಥೆಗಳಿಗೆ ಅವಕಾಶ ನೀಡಿ ಎಂದು ಹೇಳುವ ಮೂಲಕ ವಿದೇಶ ಫಾರ್ಮಾ ಕಂಪನೆಗಳಿಗೆ ನೆರವು ನೀಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss