ಹೊಸದಿಗಂತ ಆನ್ಲೈನ್ ಡೆಸ್ಕ್:
ಇತರ ಭಾಷೆಗಳಲ್ಲಿ ಅವಕಾಶ ಸಿಕ್ಕ ನಂತರ ಕನ್ನಡ ಇಂಡಸ್ಟ್ರಿಯನ್ನು ರಶ್ಮಿಕಾ ಮರೆತಿದ್ದಾರೆ ಎನ್ನುವುದಕ್ಕೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಉತ್ತರ ನೀಡಿದ್ದಾರೆ.
ಈಗಾಗಲೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಮಿಂಚುತ್ತಿರುವ ರಶ್ಮಿಕಾ ಕನ್ನಡ ಮರೆತೇ ಬಿಟ್ಟಿದ್ದಾರೆ. ಮಾತನಾಡುವಾಗ ಎಲ್ಲ ಭಾಷೆಗಳನ್ನು ಮಿಕ್ಸ್ ಮಾಡುತ್ತಾರೆ ಎಂದು ಹಲವರಿಗೆ ಅಸಮಾಧಾನ ಇದೆ ಅದಕ್ಕೆಲ್ಲ ಉತ್ತರ ನೀಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
ನಾನು ಒಂದೇ ಸಮನೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸುತ್ತೇನೆ. ಸಮಯದ ಅಭಾವ ಎನಿಸುತ್ತಿದೆ. ಹೊಸ ಭಾಷೆಗಳನ್ನು ಕಲಿಯುತ್ತಿದ್ದೇನೆ. ಕೆಲವೊಮ್ಮೆ ಇವು ಮಿಕ್ಸ್ ಆಗುತ್ತವೆ ಎಂದಿದ್ದಾರೆ.
ಇನ್ನು ಕನ್ನಡ ಇಂಡಸ್ಟ್ರಿಯಲ್ಲಿ ನನ್ನ ಮೊದಲ ಸಿನಿಮಾ. ನನ್ನನ್ನು ಜನ ಪ್ರೀತಿಸಿದ್ದು ಮರೆತಿಲ್ಲ. ನಾನು ಕೂಡ ಕನ್ನಡ ಪ್ರೇಕ್ಷಕರನ್ನು ತುಂಬಾನೇ ಪ್ರೀತಿಸುತ್ತೇನೆ. ಆದರೆ ಅದನ್ನು ಹೇಳುವ ಬದಲು ಕೆಲಸ ಮಾಡಿ ತೋರಿಸುತ್ತೇನೆ ಎಂದಿದ್ದಾರೆ ನ್ಯಾಶನಲ್ ಕ್ರಶ್ ರಶ್ಮಿಕಾ.