ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರು ಹಣೆಗೆ ಏಕೆ ಕುಂಕುಮವಿಡಬೇಕು ಎನ್ನುತ್ತಾರೆ?

ಹಳೆ ಕಾಲದಲ್ಲಿ ಸ್ತ್ರೀಯರು ಹಣೆಗೆ ಕುಂಕುಮವಿಡದೇ ಮನೆಯಿಂದ ಒಂದು ಹೆಜ್ಜೆಯೂ ಇಡುವಂತಿರಲಿಲ್ಲ. ಆದರೆ ಇಂದು ಪ್ಯಾಷನ್ ಹೆಸರಿನಲ್ಲಿ ಹಣೆಗೆ ಕುಂಕುಮವಿಲ್ಲ, ಕೈಗೆ ಬಳೆಯಿಲ್ಲ. ಜೀನ್ಸ್, ಟೀ ಶರ್ಟ್ ಧರಿಸಿ ಫ್ರೀ ಹೇರ್ ಬಿಟ್ಟ ಮೇಲೆ ಕುಂಕುಮವಿಟ್ಟರೆ ಏನ್ ಚೆಂದ ಎನ್ನುವುದು ಇಂದಿನ ಹೆಣ್ಣುಮಕ್ಕಳ ವಾದ. ಹಳ್ಳಿ, ಪೇಟೆ ಎಂಬುದಿಲ್ಲ ಕುಂಕುಮವಿಡುವ ಪದ್ಧತಿ ನಶಿಸುತ್ತಿದೆ. ಹೇಗೆ ಸೀರೆ, ಚೂಡಿದಾರ, ಲಂಗದವಣಿ ತೊಡುವವರ ಸಂಖ್ಯೆ  ಕಡಿಮೆ ಆಗುತ್ತಿದೆಯೋ ಹಾಗೆ ಹಣೆಗೆ ಕುಂಕುಮ ಇಡುವವರ ಸಂಖ್ಯೆ ಕೂಡ ಕಡಿಮೆ ಆಗಿದೆ.

ಏಕೆ ಹಣೆಗೆ ಕುಂಕುಮ ಇಡಬೇಕು ಎನ್ನುತ್ತಿದ್ದರು? ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು?.. ಹಣೆಯಲ್ಲಿ ಏಳು ನರಗಳು ಸೇರುತ್ತಿದ್ದು ಅಲ್ಲಿ ಕುಂಡಲಿನಿ ಶಕ್ತಿಯು ಕುಂಕುಮದಿಂದಾಗಿ ಜಾಗೃತವಾಗುತ್ತದೆ ಮತ್ತು ಕುಂಕುಮ ಧಾರಣೆ ಕೇಂದ್ರದಲ್ಲಿರುವ ಚಕ್ರದ ಮೇಲೆ ಒತ್ತಡ ಬೀರಿ ಮುಖದಲ್ಲಿನ ನರಮಂಡಲಕ್ಕೆ ಸರಾಗವಾಗಿ ರಕ್ತ ಸಂಚಾರ ಮಾಡುತ್ತದೆ.

ಕುಂಕುಮವಿಡುವ ಭಾಗ ಭ್ರೂಮಧ್ಯೆ ನಿರ್ನಾಳಗಳಲ್ಲಿಯೇ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆಯಲ್ಲಿ ಧರಿಸಿದ ಕುಂಕುಮ ಪಿಟ್ಯುಟರಿಯನ್ನು ಉತ್ತೇಜಿಸಿ ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss