ನೀವು ಇದನ್ನು ಗಮನಿಸಿರಬಹುದು. ಹಿರಿಯರು ಮನೆಗೆ ಯಾರೇ ಅತಿಥಿಗಳು ಬಂದರೂ ಎರಡು ಕೈ ಜೋಡಿಸಿ ನಮಸ್ಕರಿಸುತ್ತಿದ್ದರು. ಇಂದು ಸಮಸ್ಕಾರ ಹೋಗಿ ಕೈ ಕುಲುಕಿ ಹಾಯ್ ಎನ್ನುತ್ತೇವೆ. ಯಾಕೆ ಮೊದಲೆಲ್ಲ ಮನೆಗೆ ಬಂದವರನ್ನು ಕೈ ಜೋಡಿ ಸಮಸ್ಕರಿಸುತ್ತಿದ್ದರು ಗೊತ್ತಾ?
ಎರಡು ಕೈಗಳ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ.
ಇದರಿಂದ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸಲು ಹೋಗದ ಕಾರಣ, ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ. ಹಾಗಾಗಿಯೇ ಹಿರಿಯರು ಕೈ ಜೋಡಿಸಿ ಸಮಸ್ಕರಿಸುತ್ತಿದ್ದಿದ್ದು.