Thursday, July 7, 2022

Latest Posts

ಕೂದಲು ಕಟ್ ಮಾಡಿಸಿಕೊಂಡ ನಂತರ ಸ್ನಾನ ಮಾಡಿಯೇ ಮನೆ ಒಳ ಪ್ರವೇಶಿಸಬೇಕೆನ್ನುವುದೇಕೆ?

ಶಾಸ್ತ್ರ-ಸಂಪ್ರದಾಯ, ಮಡಿ-ಮೈಲಿಗೆ ಆಚರಣೆ ಮಾಡುವ ಮನೆಗಳಲ್ಲಿ ಇಂದಿಗೂ ಕೂಡ ಈ ಆಚರಣೆ ಇದೆ. ಕೂದಲು ಕತ್ತರಿಸಿಕೊಂಡ ನಂತರ ತಲೆಗೆ ಕೊಬ್ಬರಿ ಎಣ್ಣೆ ಹಾಕಿಕೊಂಡು, ಸ್ನಾನ ಮಾಡಿಯೇ ಮನೆ ಒಳಗೆ ಪ್ರವೇಶಿಸಬೇಕು. ಯಾವ ವಸ್ತುವನ್ನು ಮುಟ್ಟುವಂತಿಲ್ಲ.

ಕೂದಲು ತೆಗೆಸಿಕೊಂಡವನು ಸ್ನಾನ ಮಾಡಿಯೇ ಒಳ ಪ್ರವೇಶಿಸಬೇಕೆನ್ನುವುದು ಕೇವಲ ಆರೋಗ್ಯ ದೃಷ್ಟಿಯಿಂದ ಮಾತ್ರ. ಕೂದಲು ತೆಗೆಯುವ ಕ್ಷೌರಿಕರು ಕೆಳ ಜಾತಿಯವರು ಹಾಗಾಗಿ ಸ್ನಾನ ಮಾಡಿಯೇ ಒಳ ಪ್ರವೇಶಿಸಬೇಕು ಎನ್ನುತ್ತಾರೆ ಎಂಬುದು ತಪ್ಪು ತಿಳುವಳಿಕೆ. ಇಲ್ಲಿ ಯಾವುದೇ ಮೇಲು ಕೀಳು ಎಂಬುದಿಲ್ಲ.

ಕೂದಲು ಕಟ್ ಮಾಡುವಾಗ ಮೈ ಮೇಲೆಲ್ಲ ಕೂದಲಿನ ಸಣ್ಣ ತುಂಡು ಬಿದ್ದಿರುತ್ತದೆ. ಇದು ಆಹಾರ ಪದಾರ್ಥಗಳ ಮೇಲೆಲ್ಲ ಬಿದ್ದು, ಹೊಟ್ಟೆಗೆ ಹೋದರೆ ಅಲರ್ಜಿಯಾಗುತ್ತದೆ ಎನ್ನುವ ಕಾರಣಕ್ಕೆ ಸ್ನಾನ ಮಾಡಿಯೇ ಒಳ ಪ್ರವೇಶಿಸಬೇಕು ಎನ್ನುವುದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss