ಮಹಾ ಕುಂಭಮೇಳದಲ್ಲೇಕೆ ಪ್ರಯಾಗ್‌ರಾಜ್‌ನಲ್ಲಿ ಸ್ನಾನ ಮಾಡಬೇಕು? ಇದರ ಪ್ರಾಮುಖ್ಯತೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಮಹಾಕುಂಭಮೇಳ ಆರಂಭವಾಗಲಿದ್ದು, ಪ್ರಯಾಗ್‌ರಾಜ್‌ನಲ್ಲಿ  ಸ್ನಾನ ಮಾಡುವುದಕ್ಕೆ ಭಕ್ತರು ಮುಗಿಬೀಳುತ್ತಾರೆ. ಈ ರೀತಿ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಇದೆ.

ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಆಚರಣೆಯಾಗಿದೆ. ದೇಶ ಮತ್ತು ವಿದೇಶಗಳಿಂದ ಕೋಟ್ಯಂತರ ಜನರು ಇಲ್ಲಿಗೆ ಬಂದು ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ. ಮಹಾ ಕುಂಭಮೇಳವು ಜಗತ್ತಿನ ಅತ್ಯಂತ ಹಳೆಯ ಧಾರ್ಮಿಕ ಆಚರಣೆ ಎಂದು ಹೇಳಲಾಗುತ್ತದೆ. ಇದಕ್ಕಿಂತ ಪ್ರಾಚೀನವಾದ ಯಾವುದೇ ಧಾರ್ಮಿಕ ಆಚರಣೆ ಇನ್ನೂ ಎಲ್ಲಿಯೂ ಲಿಖಿತ ರೂಪದಲ್ಲಿ ಕಂಡುಬಂದಿಲ್ಲ. ಮಹಾ ಕುಂಭಮೇಳದಲ್ಲಿ ಸ್ನಾನ ಮತ್ತು ಧ್ಯಾನಕ್ಕೆ ತನ್ನದೇ ಆದ ಮಹತ್ವವಿದೆ.

ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ ನಡೆಯುವ ಶಾಹಿ ಸ್ನಾನದ ದಿನವು ಸ್ನಾನ ಮಾಡುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಒಂದು ವೇಳೆ ನೀವು ಸಾಮಾನ್ಯ ದಿನಗಳಲ್ಲಿ ಪ್ರಯಾಗ್‌ರಾಜ್‌ಗೆ ಹೋಗಿದ್ದರೂ ಸಹ, ಅದರ ಪ್ರಾಮುಖ್ಯತೆಯು ಕಡಿಮೆಯಾಗುವುದಿಲ್ಲ. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಮಹಾಕುಂಭಕ್ಕೆ ಭೇಟಿ ನೀಡಿ ಅಲ್ಲಿ ಸ್ನಾನ ಮಾಡಿದ್ದರೆ, ಈ ಜನ್ಮದ ಹಾಗೂ ಹಿಂದಿನ ಜನ್ಮದ ಪಾಪಗಳು ಕಳೆಯುತ್ತದೆ ಎನ್ನುವ ನಂಬಿಕೆಯಿದೆ. ಇದಲ್ಲದೆ, ನಿಮ್ಮ ಪೂರ್ವಜರ ಆತ್ಮಗಳು ಸಹ ಶಾಂತಿ ಮತ್ತು ಮೋಕ್ಷವನ್ನು ಪಡೆಯುತ್ತವೆ.

ನೀವು ಮಹಾಕುಂಭದಲ್ಲಿ ಸ್ನಾನ ಮಾಡಲಿದ್ದರೆ, ಕೆಲವು ನಿಯಮಗಳನ್ನು ನೆನಪಿನಲ್ಲಿಡಿ ಇಲ್ಲದಿದ್ದರೆ ಮಹಾಕುಂಭ ಸ್ನಾನದ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆ ನಿಯಮಗಳು ಹೀಗಿವೆ ನೋಡಿ

ನಾಗ ಸಾಧುಗಳು ಮೊದಲ ಸ್ನಾನವನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ನೆನಪಿಡಿ, ಆದ್ದರಿಂದ ಅವರ ಮುಂದೆ ತಪ್ಪಾಗಿ ಸ್ನಾನ ಮಾಡಬೇಡಿ.ಸಾಧುಗಳ ಪೂಜೆಯ ನಂತರ ನೀವು ಸ್ನಾನ ಮಾಡಬಹುದಾಗಿದೆ.
ಸ್ನಾನದ ನಂತರ ನೀವು ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಪುಣ್ಯ ಫಲಗಳು ಪ್ರಾಪ್ತವಾಗುವುದು. ಶಾಸ್ತ್ರಗಳ ಪ್ರಕಾರ, ವಿವಾಹಿತರು ಐದು ಬಾರಿ ಸ್ನಾನ ಮಾಡುವುದು ಕಡ್ಡಾಯವಾಗಿದೆ. ಇದಾದ ನಂತರ, ನೀವು ಮನೆಯಿಂದ ತೆಗೆದುಕೊಂಡು ಬಂದಿರುವ ವಸ್ತುಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು ಎನ್ನಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!