Tuesday, June 28, 2022

Latest Posts

ಕಾಲು ತೊಳೆಯುವಾಗ ಹಿಮ್ಮಡಿ ನೆನೆಯದಿದ್ದರೆ ಶನಿ ಹಿಡಿಯುತ್ತಾನೆಯೇ?

ಹೆಚ್ಚಾಗಿ ಮಕ್ಕಳು ಕಾಲು ತೊಳೆಯುವುದು ಹೀಗೆಯೇ. ಬಚ್ಚಲು ಮನೆಗೆ ಓಡಿ ಹೋಗಿ, ಕಾಲಿಗೆ ಎರಡು ತಂಬಿಕೆ ನೀರು ಹಾಕಿಕೊಂಡು ಬಂದು ಬಿಡುತ್ತಾರೆ. ಹಿಮ್ಮಡಿ ತೊಳೆಯುವುದೇ ಇಲ್ಲ. ಆಗ ಮನೆಯಲ್ಲಿ ಅಜ್ಜ- ಅಜ್ಜಿ ಇದ್ದರೆ ಹೇಳುತ್ತಾರೆ ” ಹಿಮ್ಮಡಿಗೆ ನೀರು ತಾಗಿಸದಿದ್ದರೆ ಶನಿ ಹಿಡಿಯುತ್ತಾನೆ” ಎಂದು. ಈ ಅನುಭವ ನಿಮಗೂ ಆಗಿರಬಹುದು.

ಏಕೆ ಹೀಗೆ ಹೇಳುತ್ತಾರೆ? ಇದರ ಹಿಂದಿರುವುದು ಸ್ವಚ್ಛತೆಯ ದೃಷ್ಟಿ ಮಾತ್ರ. ಎಲ್ಲಾದರೂ ಆಚೆ ಹೋಗಿ ಬಂದಾಗ ಗಡಿಬಿಡಿಯಲ್ಲಿ ಪಾದಕ್ಕೆಷ್ಟೆ ನೀರು ಹಾಕಿಕೊಂಡು ಬರುತ್ತೇವೆ. ಹಿಮ್ಮಡಿ ತೊಳೆಯುವುದಿಲ್ಲ. ಆದರೆ ಹಿಮ್ಮಡಿಯಲ್ಲಿಯೇ ಹೆಚ್ಚಾಗಿ ಧೂಳು, ಕೆಸರು ಇರುವುದು. ಹಾಗಾಗಿ ನಮ್ಮ ಹಿರಿಯರು ಹಿಮ್ಮಡಿ ಸರಿಯಾಗಿ ತೊಳೆದು ಕೊಳ್ಳಲಿ ಎಂಬ ಕಾರಣಕ್ಕೆ ಶನಿ ದೇವರ ಹೆಸರು ಹೇಳಿ ಭಯಗೊಳಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss