Monday, August 8, 2022

Latest Posts

ವಿಧವೆಯರು ಹಣೆಗೆ ಕುಂಕುಮ ಇಡಬಾರದು ಅನ್ನೋದೇಕೆ?

ಭಾರತದ ಕೆಲವು ಸಂಪ್ರದಾಯಸ್ಥ ಕುಟುಂಬಗಳಲ್ಲಿ ಗಂಡ ಸತ್ತಮೇಲೆ ಆತನ ಹೆಂಡತಿಯ ಬಳೆ ಒಡೆದು, ಹಣೆಯ ಕುಂಕುಮ ಅಳಿಸಿ, ಕೇಶಮುಂಡನ ಮಾಡಿಸಿ ಬಿಳಿ ಸೀರೆ ತೊಡಿಸುತ್ತಾರೆ.  ಆಗಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಇದೊಂದು ಶಾಸ್ತ್ರದಂತೆ ಜಾರಿಯಲ್ಲಿತ್ತು.  ಆದರೆ ಈಗ ಕೆಲವು ಕಡೆಗಳಲ್ಲಿ ಮಾತ್ರ ಈ ಪದ್ಧತಿ ಇದೆ. ಏಕೆ ಈ ರೀತಿ ಪದ್ಧತಿ ಜಾರಿಯಲ್ಲಿದೆ ಗೊತ್ತಾ?

ಏಕೆಂದರೆ ಹಣೆಗೆ ಕುಂಕುಮವಿಟ್ಟು,  ಸೀರೆ ಉಟ್ಟು, ಕೈಗೆ ಬಳೆ ತೊಟ್ಟು, ಉದ್ದದ ಕೇಶ ಬಿಟ್ಟುಕೊಂಡರೆ ಪ್ರತಿ ಹೆಣ್ಣಿನ ಸೌಂದರ್ಯವೂ ಇಮ್ಮಡಿಯಾಗುತ್ತದೆ. ಸುಂದರವಾಗಿ ಕಾಣುವವರ ಮೇಲೆ ಕೆಲವು ಪುರುಷರ ಕೆಟ್ಟ ದೃಷ್ಟಿ ಬೀಳುವುದು ಸಹಜ. ಹಾಗಾಗಿ ಗಂಡ ಸತ್ತ ಮೇಲೆ ಆತನ ಪತ್ನಿಯನ್ನು ಇನ್ನೊಬ್ಬ ಪುರುಷನ ಕೆಟ್ಟ ದೃಷ್ಟಿಯಿಂದ ಕಾಪಾಡುವ ದೃಷ್ಟಿಯಿಂದ ವಿಧವೆಯರು ಹಣೆಗೆ ಕುಂಕುಮ ಇಡಬಾರದು ಎನ್ನುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss