Wednesday, June 29, 2022

Latest Posts

ಮಂಗಳವಾರ ಮಹಿಳೆಯರು ಕೂದಲು ಕತ್ತರಿಸಿದರೆ ಅಪಶಕುನ ಅನ್ನೋದೇಕೆ?

ಸಂಪ್ರದಾಯಸ್ಥ ಮನೆಗಳಲ್ಲಿ ಇಂದಿಗೂ ಈ ಪದ್ಧತಿ ಇದೆ. ಹುಟ್ಟಿದ ವಾರ, ಮಂಗಳವಾರ ಕೂದಲು ಕತ್ತರಿಸುವುದಿಲ್ಲ. ಎಷ್ಟೇ ಅನಿವಾರ್ಯವಿದ್ದರೂ ಈ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಕೂದಲು ಕತ್ತರಿಸುವುದಕ್ಕೆ ಬಿಡುವುದಿಲ್ಲ.

ಕಾರಣ ಕೇಳಿದರೆ ಹೆಣ್ಣುಮಕ್ಕಳು ಮಂಗಳವಾರ ಕೂದಲು ಕತ್ತರಿಸಿದರೆ ಅಪಶಕುನ. ಮನೆಗೆ ದರಿದ್ರ ಲಕ್ಷ್ಮೀ ಸೇರುತ್ತಾಳೆ ಎನ್ನುತ್ತಾರೆ.

ಆದರೆ ಕಾರಣ ಬೆರೆಯೇ ಇದೆ. ಹಳೆ ಕಾಲದಲ್ಲಿ ಪ್ರತಿ ಮಂಗಳವಾರವೂ ದೇವಿಗೆ ಹೋಮ, ಹವನ, ಪೂಜೆ, ಆರಾಧನೆ ನಡೆಯುತ್ತಿತ್ತು. ಮಹಿಳೆಯರು ತಲೆ ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ದೇವಿಗೆ ಪೂಜೆ ಮಾಡುತ್ತಿದ್ದರು. ಆ ದಿನಗಳಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸಿಕೊಳ್ಳುವಷ್ಟು ಸಮಯವೂ ಇರುತ್ತಿರಲಿಲ್ಲ ಮತ್ತು ಶುಚಿತ್ವದ ದೃಷ್ಟಿಯಿಂದ ಕೂದಲು ಕತ್ತರಿಸುತ್ತಿರಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss