ಮಾತೆತ್ತಿದರೆ ‘ಸಂವಿಧಾನ’ ಎನ್ನುತ್ತಿದ್ದವರೆಲ್ಲ ನೂಪುರ್ ಶರ್ಮ ತಲೆ ತೆಗೆಯಲು ಹವಣಿಸುತ್ತಿರೋದೇಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮಗೆ ಎಲ್ಲೆಲ್ಲಿ ಅನುಕೂಲವಾಗುತ್ತದೆಯೋ ಅಲ್ಲೆಲ್ಲ ಕಾನೂನು, ಅಲ್ಪಸಂಖ್ಯಾತ ಹಕ್ಕು ಎಂದೆಲ್ಲ ಮಾತನಾಡುವ ಉದಾರವಾದಿಗಳ ಬಣ್ಣ ನೂಪುರ್ ಶರ್ಮ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳಲ್ಲಿ ಬಯಲಾಗಿ ನಿಂತಿದೆ. ನೂಪುರ್ ಶರ್ಮ ಅವರ ತಲೆ ಕಡಿಯುವ ಹೇಳಿಕೆಗಳನ್ನು ಸ್ಪಷ್ಟವಾಗಿ ವಿರೋಧಿಸುವುದಕ್ಕೆ ಯಾವ ಉದಾರವಾದಿಯೂ ಸಿದ್ಧವಿಲ್ಲದಿರುವ ವಿದ್ಯಮಾನ ಒಂದೆಡೆ ಆದರೆ, ಇನ್ನೊಂದೆಡೆ ಇಸ್ಲಾಂವಾದಿಗಳು ಅದ್ಯಾವ ಕಾನೂನಿನ ಭಯವೂ ಇಲ್ಲದೇ ತಲೆ ಕಡಿಯುವ ಪ್ರಚೋದನೆಗಳನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ಕನ್ನಡಿ ಹಿಡಿಯುವ ಮೂರು ಪ್ರಸಂಗಗಳು ಇಲ್ಲಿವೆ.

  • ಭೀಮಸೇನೆಯ ಮುಖ್ಯಸ್ಥನಾಗಿರುವ ನವಾಬ್‌ ಸತ್ಪಾಲ್‌ ತನ್ವರ್‌ ಎಂಬಾತ ನೂಪುರ್‌ ಶರ್ಮಾ ಅವರ ತಲೆಗೆ ಬಹುಮಾನ ಘೋಷಿಸಿದ್ದಾನೆ. ಅವರ ನಾಲಿಗೆಯನ್ನು ಕತ್ತರಿಸಿ ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾನೆ. ಜೊತೆಗೆ ನೂಪುರ ಶರ್ಮಾ ತನ್ನೆದುರು ಮುಜ್ರಾ (ವೇಶ್ಯೆಯ ನೃತ್ಯ) ಮಾಡುವಂತೆ ಮಾಡುತ್ತೇನೆಂದು ಹೇಳಿದ್ದಾನೆ. ಆತನ ಭಾಷಣವನ್ನು ಟ್ವೀಟ್‌ ಮಾಡಿರುವ ಪತ್ರಕರ್ತೆ ಸ್ವಾತಿ ಗೋಯಲ್‌ ಶರ್ಮಾ “ಧರ್ಮನಿಂದಕರ ನಾಲಿಗೆಯನ್ನು ಕಡಿಯುವುದು, ಆಕೆ ಒಬ್ಬ ಹೆಣ್ಣು ಎಂಬ ಕಾರಣಕ್ಕೆ ಆಕೆಯ ಬಳಿ ಮುಜ್ರಾ ಮಾಡಿಸುತ್ತೇನೆಂದು ಹೇಳುವುದು, ಗಂಗಾ-ಜಮುನಾ ತೆಹಜೀಬ್‌ (ಹಿಂದು-ಮುಸ್ಲಿಂ ಸಮ್ಮಿಲನ) ಎಂದರೆ ಇದೆ” ಎಂದು ಟೀಕಿಸಿದ್ದಾರೆ.

  • ಟೈಮ್ಸ್‌ ನೌ ಮಾಧ್ಯಮದ ಚರ್ಚೆಯೊಂದರಲ್ಲಿ “ಗುಸ್ತಖ್-ಎ-ರಸೂಲ್ ಕಿ ಏಕ್ ಹಿ ಸಜಾ, ಸರ್ ತನ್ ಸೆ ಜುದಾ” (ಪ್ರವಾದಿ ವಿರುದ್ಧ ಮಾತನಾಡಿದರೆ ಒಂದೇ ಒಂದು ಶಿಕ್ಷೆ ಅದು ಶಿರಚ್ಛೇದ) ದ ಕುರಿತು ಇಬ್ಬರು ಮುಲ್ಲಾಗಳನ್ನು ಪ್ರಶ್ನಿಸಿದಾಗ ಅವರು ಅದನ್ನು ವಿರೋಧಿಸುವ ಬದಲು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಚರ್ಚೆಯಲ್ಲಿದ್ದ ಇನೊಬ್ಬ ಕಮ್ಯೂನಿಸ್ಟ್‌ ಒಬ್ಬರು ಕೂಡ ಇಸ್ಲಾಂ ನೀತಿಯನ್ನು ಬೆಂಬಲಿಸಿದ್ದು ನೆಲದ ಕಾನೂನು ಮತ್ತೆ ಇಸ್ಲಾಂ ಕಾನೂನುಗಳ ವಿಷಯ ಬಂದಾಗ ಅವರು ಇಸ್ಲಾಂ ಕಾನೂನನ್ನೇ ಬೆಂಬಲಿಸುತ್ತಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ

  • ಉಳಿದೆಲ್ಲ ಸಂದರ್ಭದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟುತ್ತಾ ಸಂವಿಧಾನ, ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡುವ ಎಐಎಂಐಎಂ ಪಕ್ಷದ ಶಾಸಕನೊಬ್ಬ ನೂಪುರ್‌ ಶರ್ಮಾ ತಲೆಕಡಿದವರಿಗೆ ಒಂದು ಕೋಟಿ ರೂಪಾಯಿಗಳ ಬಹುಮಾನವನ್ನು ಬಹಿರಂಗವಾಗಿ ಘೋಷಿಸಿದ್ದಾನೆ. ಇದು ಕಾನೂನಿನ ನಿಷ್ಠೆಗಿಂತ ಅವರಿಗಿರುವ ಇಸ್ಲಾಂ ನಿಷ್ಠೆಯನ್ನು ಎತ್ತಿತೋರಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!