ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೇಕೆದಾಟು ಚಿಂತನೆ ಏಕೆ ಮಾಡಿಲ್ಲ: ಸಚಿವ ಬಿ.ಸಿ.ಪಾಟೀಲ್ ಪ್ರಶ್ನೆ

ಹೊಸದಿಗಂತ ವರದಿ,ಗದಗ:

ಮೇಕೆದಾಟು ಕಾಂಗ್ರೆಸ್ ಪಕ್ಷದ ಆಸ್ತಿಯೇ ಅವರು ಈಗಾಗಲೇ ಮೂರು ದಿನ ವಿಧಾನಸೌಧದಲ್ಲಿ ನಿದ್ದೆ ಮಾಡಿದ್ದು, ಇನ್ನೂ ಎಚ್ಚರ ಆಗಿಲ್ಲ ಆರು ದಿನ ಕಲಾಪ ಹಾಳು ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಕಾಂಗ್ರೆಸ್ ನಾಯಕರ ವಿರುದ್ದ ಕಿಡಿ ಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲಾಪದಲ್ಲಿ ಜನರ ಸಮಸ್ಯೆಗಳಿಗೆ, ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲಿಲ್ಲ. ಅದಕ್ಕೆ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದಾರೆ. ಜನರ ಗಮನವನ್ನು ಸೆಳೆಯಲು ಮೇಕೆದಾಟು ೨.ಓ. ಎಂಬ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಮೇಕೆದಾಟುಗೆ ವಿರೋಧಿ ಇಲ್ಲ. ಈಗಾಗಲೇ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಪರಿಸರ ಇಲಾಖೆಯಿಂದ ಕ್ಲೀಯರನ್ಸ್ ಸಿಕ್ಕ ತಕ್ಷಣ ಕೆಲಸ ಪ್ರಾರಂಭವಾಗುತ್ತದೆ. ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾಗ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಯಾಕೆ ಮೇಕೆದಾಟು ಬಗ್ಗೆ ಚಿಂತನೆ ಮಾಡಿಲ್ಲ ಎಂದು ಬಿ.ಸಿ. ಪಾಟೀಲ ಪ್ರಶ್ನೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!