ಯಾವುದೇ ದಾರ್ಮಿಕ ಕಾರ್ಯವಾದರೂ ಹಿಂದೂ ಸಂಪ್ರದಾಯದಲ್ಲಿ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುತ್ತಾರೆ. ಹಾಗೆಯೇ ಪೂಜಾಕಾರ್ಯದಲ್ಲಿಯೂ ಮಾವಿನ ಎಲೆಯನ್ನು ಬಳಸುತ್ತಾರೆ. ಇದರ ಹಿಂದಿರುವುದು ಕೇವಲ ಸಂಪ್ರದಾವಲ್ಲ. ವೈಜ್ಞಾನಿಕ ಕಾರಣ ಕೂಡ ಇದೆ.
ಮಾವಿನ ಎಲೆಗೆ ಸೂಕ್ಷ್ಮ ಕ್ರಿಮಿಗಳು ಮತ್ತು ಅಪಾಯಕಾರಿ ಕೀಟಗಳನ್ನು ನಾಶಪಡಿಸುವ ಶಕ್ತಿ ಇದೆ. ಮನೆಯಲ್ಲಿ ಶುಭಕಾರ್ಯವಿದ್ದಾಗ ಅತಿಥಿಗಳು ಬಂದಿರುತ್ತಾರೆ. ಅವೆಲ್ಲರ ಉಸಿರಾಟದಿಂದ ಗಾಳಿ ಮಲೀನವಾಗುವ ಸಾಧ್ಯತೆ ಇರುತ್ತದೆ. ಮಾವಿನ ತೋರಣ ಕಟ್ಟುವುದರಿಂದ ಅಪಾಯಕಾರಿ ಗಾಳಿಯನ್ನು ಶುದ್ಧಗೊಳಿಸುತ್ತದೆ.