ಬೆಳಗ್ಗೆ ತಿಂಡಿಗೆ ಮುಂಚೆ ಸ್ನಾನ ಮಾಡೋಕೆ ಸಮಯ ಆಗದಿದ್ದರೆ ತಿಂಡಿ ತಿಂದ ತಕ್ಷಣ ಹೋಗಿಬಿಡ್ತೇವೆ. ಊಟಕ್ಕೂ ಸ್ನಾನಕ್ಕೂ ಏನು ಸಂಬಂಧ ಅನಿಸೋದು ಸಾಮಾನ್ಯ. ಊಟದ ನಂತರ ಸ್ನಾನ ಯಾಕೆ ಮಾಡಬಾರದು?
ಹೊಟ್ಟೆಯಲ್ಲಿ ಆಗಿನ್ನು ಆಹಾರ ಸೇರಿದ್ದು, ತಕ್ಷಣವೇ ಸ್ನಾನಕ್ಕೆ ಹೋದರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹೊಟ್ಟೆಯಲ್ಲಿ ಇರಬೇಕಾದ ರಕ್ತ ಸ್ನಾನ ಮಾಡಿದಾಗ ಎಲ್ಲ ಅಂಗಗಳಲ್ಲಿಯೂ ಚಲಿಸುತ್ತದೆ. ಇದರಿಂದ ಅಜೀರ್ಣ ಆಗುತ್ತದೆ.