Sunday, August 14, 2022

Latest Posts

ಸಂಜೆ ಹೊತ್ತು ಉಗುರು ಏಕೆ ಕತ್ತರಿಸಬಾರದು?

ಕೈತುಂಬಾ ಉಗುರು ಬಿಟ್ಟರೂ ಮನೆಯಲ್ಲಿ ಬೈತಾರೆ, ಹಾಗಂತ ಸಂಜೆ ಸಮಯದಲ್ಲಿ ಕತ್ತರಿಸಿದರೂ ಬೈತಾರೆ. ಸಂಜೆ ಹೊತ್ತು ಉಗುರು ಕತ್ತರಿಸಿದರೆ ಏನಾಗುತ್ತೆ ಎಂದು ಕೇಳಿ ನೋಡಿ.. ಅಮ್ಮ ಮುಖ ಗಂಟು ಹಾಕಿಕೊಳ್ಳುತ್ತಾಳೆ ಆದರೆ ಉತ್ತರ ಮಾತ್ರ ಕೊಡೋದಿಲ್ಲ. ನಾಳೆ ಬೆಳಗ್ಗೆ ಕತ್ತರಿಸು ಎಂದು ಹೇಳುತ್ತಾರೆ. ಇದಕ್ಕೆ ಒಂದೇ ಕಾರಣ ಅವರಿಗೂ ಉತ್ತರ ಗೊತ್ತಿರೋದಿಲ್ಲ. ಅವರಮ್ಮ ಅವರಿಗೆ ಹೇಳಿದ್ದನ್ನು ಅವರು ನಿಮಗೆ ಹೇಳ್ತಾರೆ. ಆದರೆ ನಿಮ್ಮ ಮಕ್ಕಳು ಪ್ರಶ್ನೆ ಕೇಳಿದಾಗ ನೀವು ಸರಿಯಾದ ಉತ್ತರ ಕೊಡಿ..
ಸಂಜೆ ಮೇಲೆ ಉಗುರನ್ನು ಯಾಕೆ ಕತ್ತರಿಸಬಾರದು ಗೊತ್ತಾ?

  • ಆಗಿನ ಕಾಲದಲ್ಲಿ ಕರೆಂಟ್ ಇರುತ್ತಿರಲಿಲ್ಲ. ನೀವು ಕತ್ತರಿಸಿದ ಉಗುರು ಹಾರಿ ಹೋಗುತ್ತಿತ್ತು. ಇದನ್ನು ತೆಗೆದು ಹೊರ ಬಿಸಾಡಲು ಕಷ್ಟ ಆಗುತ್ತದೆ. ಅದು ನೆಲದಲ್ಲಿ ಬಿದ್ದು, ಯಾವುದಾದರೂ ಆಹಾರ ಪದಾರ್ಥದಲ್ಲಿ ಸೇರಿದರೆ ಅಲರ್ಜಿ ಆಗುತ್ತದೆ. ಆಹಾರ ಸಮಸ್ಯೆಯೂ ಬರುತ್ತದೆ.
  • ಆಗಿನ ಕಾಲದಲ್ಲಿ ನೇಲ್ ಕಟರ್‌ಗಳು ಇರುತ್ತಿರಲಿಲ್ಲ. ಚಾಕುವಿನಲ್ಲೇ ಉಗುರು ಕತ್ತರಿಸುತ್ತಿದ್ದರು. ಕತ್ತಲಲ್ಲಿ ಚಾಕು ಬಳಸಿದರೆ ಉಗುರಿನ ಜೊತೆಗೆ ಬೇರೆಡೆ ಚಾಕು ತಾಕುವ ಸಾಧ್ಯತೆ ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss