ಎಷ್ಟೋ ಬಾರಿ ಒಂದು ಮಾತ್ರೆ ಓಪನ್ ಮಾಡಲು ಹೋಗಿ ಇನ್ನೊಂದು ಮಾತ್ರೆಯನ್ನೂ ತೆಗೆದು ಬಿಡುತ್ತೇವೆ. ಪ್ರತಿದಿನ ಮಾತ್ರೆ ಕುಡಿಯುವವರಾದರೆ ನಾಳೆಗೆ ಹಾಗೆ ಕುಡಿದರಾಯ್ತು ಎಂದು ಮಾತ್ರೆಯನ್ನು ಬೇರೆ ಯಾವುದಾದರೂ ಡಬ್ಬಿಗೆ ಹಾಕಿ ಎತ್ತಿಡುತ್ತಾರೆ. ಓಪನ್ ಆದ ಮಾತ್ರೆಗಳನ್ನು ಯಾಕೆ ಕುಡಿಯಬಾರದು?
ಮಾತ್ರೆಗಳನ್ನು ಸ್ಟೋರ್ ಮಾಡಲು ಅದರದ್ದೇ ಆದ ರೀತಿ ಇದೆ. ಮಾತ್ರೆಗಳಲ್ಲಿ ತೂತು, ಅಥವಾ ಸೈಡ್ ಓಪನ್ ಆಗಿದ್ದರೆ ಅದು ಗಾಳಿಯ ಜೊತೆ ಸೇರಿ ಕೆಮಿಕಲ್ ರಿಯಾಕ್ಷನ್ ಆಗುತ್ತದೆ. ಜೊತೆಗೆ ಅತೀ ಬಿಸಿಲು, ಗ್ಯಾಸ್ ಸ್ಟೋವ್ ಪಕ್ಕ ಅಥವಾ ತಣ್ಣಗಿನ ಜಾಗದಲ್ಲಿ ಮಾತ್ರೆ ಇಡದಿದ್ದರೆ ಒಳ್ಳೆಯದು.