Sunday, April 11, 2021

Latest Posts

ಒದ್ದೆ ಟವಲ್ ಬೆಡ್ ಮೇಲೆ ಹಾಕಿ ಬೈಸ್ಕೊಂಡಿದ್ದೀರಾ?

ಸಿನಿಮಾಗಳಲ್ಲಿ ನೋಡಿದ್ದೀರಾ? ಸಿನಿಮಾ ಬಿಡಿ ಈ ಸೀನ್‌ನ್ನು ನೀವು ಮನೆಯಲ್ಲೇ ನೋಡಿರ‍್ತೀರಾ.. ಅಷ್ಟೇ ಯಾಕೆ ಈ ಸೀನ್‌ನ ಹೀರೋ, ಹೀರೋಯಿನ್ ಕೂಡ ನೀವೆ.. ಯಾವ ಸೀನ್ ಗೊತ್ತಾ?
ಹೀರೋ ಸ್ನಾನ ಮಾಡಿ ಬಂದು ಒದ್ದೆ ಟವಲ್‌ನ್ನು ಬೆಡ್ ಮೇಲೆ ಬಿಸಾಡೋದು!
ಒಂದು ಕ್ಷಣ ಅಮ್ಮ, ಮಡದಿ ಬೈಗುಳ ನೆನಪಾಯ್ತಾ? ಅದೆಷ್ಟು ಬಾರಿ ಒದ್ದೆ ಟವಲ್ ತಂದು ಹಾಸಿಗೆ ಮೇಲೆ ಎಸೆದಿದ್ದೀರಾ? ಅಮ್ಮ ಬೈದು ಟವಲ್ ಹಗ್ಗದ ಮೇಲೆ ಹಾಕುತ್ತಾರೆ. ಆದರೆ ಹೆಂಡತಿ ಅಷ್ಟು ಸಾಫ್ಟ್ ಅಲ್ಲ, ದಿನವೂ ಅದನ್ನು ನೀವೆ ಎತ್ತಿ ಹಾಕಬೇಕು.. ಇಲ್ಲವಾದರೆ ಜಗಳ ಗ್ಯಾರೆಂಟಿ.
ಅಪರೂಪಕ್ಕಾದರೂ ಹೆಣ್ಮಕ್ಕಳ ಮಾತು ಕೇಳಿ. ಒದ್ದೆ ಟವಲ್ ಹಾಗೆ ಹಾಸಿಗೆ ಮೇಲೆ ಹಾಕಿದರೆ ಫಂಗಸ್ ಬರುತ್ತದೆ. ಟವಲ್‌ನಲ್ಲಿ ಇರುವ ಕಪ್ಪು ಚುಕ್ಕೆ ರೀತಿ ಕಲೆ ಬಗ್ಗೆ ಗೊತ್ತಾ? ಇದ ಒದ್ದೆ ಟವಲ್ ಅಲ್ಲಲ್ಲೇ ಬಿಡೋದಕ್ಕೆ ಬರುವುದು. ಇನ್ನು ಟವಲ್ ಕೂಡ ಹಾಳು, ಜೊತೆಗೆ ಹಾಸಿಗೆಯಿಂದಲೂ ವಾಸನೆ ಬರುತ್ತದೆ.
ಇನ್ಮೇಲಾದರೂ ಟವಲ್ ಹೊರಗೆ ಹಾಕ್ತೀರಾ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss