Wednesday, August 17, 2022

Latest Posts

ಹುಷಾರಿಲ್ಲದಾಗ ಸ್ನಾನ ಮಾಡಿದರೆ ಏನಾಗುತ್ತೆ?

ಜ್ವರ, ಶೀತ, ತಲೆನೋವು ಬಂದಾಗ ಸ್ನಾನ ಮಾಡದೇ ಇನ್ನೂ ಆರಾಮಿಲ್ಲದಂತೆ ಭಾಸವಾಗುತ್ತದೆ. ದಿನವೂ ಸ್ನಾನ ಮಾಡಿ ಅಭ್ಯಾಸ ಇರುವವರಿಗೆ ಒಂದು ದಿನ ಸ್ನಾನ ಮಾಡದಿದ್ದರೆ ತನಗೇನೋ ಆರಾಮಿಲ್ಲ ಎನಿಸುತ್ತದೆ. ಆದರೆ ಜ್ವರ ಬಂದ ಸಮಯದಲ್ಲಿ ಸ್ನಾನ ಮಾಡೋದಕ್ಕೆ ಮನೆಯವರು ಬಿಡೋದಿಲ್ಲ ಇದಕ್ಕೆ ಕಾರಣ ಏನು?

ಜ್ವರದ ಸಮಯದಲ್ಲಿ ನಮ್ಮ ದೇಹದ ತಾಪಮಾನ ಹೆಚ್ಚಿರುತ್ತದೆ. ಈ ಸಮಯದಲ್ಲಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ತಾಪಮಾನ ಇನ್ನೂ ಹೆಚ್ಚಾಗುತ್ತದೆ. ಆಗ ಜ್ವರದ ಉಷ್ಣತೆ ನೋಡಿ ಕೆಲವರು ಪ್ಯಾನಿಕ್ ಆಗುತ್ತಾರೆ. ಇನ್ನೂ ಹಲವರಿಗೆ ತಲೆ ಸ್ನಾನ ಮಾಡಿದರೆ ನೆಗಡಿ ಆಗುತ್ತದೆ. ಇನ್ನು ಶೀತ ಇರುವ ಸಮಯದಲ್ಲಿ ತಲೆ ಸ್ನಾನ ಮಾಡಿದರೆ ಅದು ಹೆಚ್ಚಾಗುತ್ತದೆ. ಹಾಗಾಗಿ ಸ್ನಾನ ಮಾಡುವುದು ಅಷ್ಟು ಸೂಕ್ತವಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!