spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯಲ್ಲಿರುವ ಮಹಿಳೆಯರ ತೂಕ ಹೆಚ್ಚಾಗೋಕೆ ಕಾರಣ ಏನು ಗೊತ್ತಾ? ಹೀಗೆ ಖಂಡಿತಾ ಮಾಡಬೇಡಿ..

- Advertisement -Nitte

ಮಹಿಳೆಯರು ಹೆಚ್ಚಾಗಿ ತಮ್ಮವರನ್ನು ನೋಡಿಕೊಳ್ಳುವುದರಲ್ಲೇ ಸುಖ ಕಾಣುತ್ತಾರೆ. ಗಂಡ, ಮಕ್ಕಳು, ಅತ್ತೆ ಮಾವ ಸಮಯಕ್ಕೆ ಸರಿಯಾಗಿ ಊಟ ಮಾಡಿದ್ದಾರಾ ಎಂದು ನೋಡುವಾಗ ತನ್ನ ಊಟ ಆಗಿದೆಯೋ ಇಲ್ಲವೋ ಎನ್ನೋದನ್ನು ಆಕೆ ಮರೆತೇ ಬಿಡುತ್ತಾಳೆ. ತನ್ನ ತಟ್ಟೆಗೆ ಊಟ ಇಲ್ಲದಿದ್ದರೂ ಎಲ್ಲರ ಹೊಟ್ಟೆ ತುಂಬುವವರೆಗೂ ಸುಮ್ಮನೆ ನಿಲ್ಲುತ್ತಾಳೆ.
ಮಹಿಳೆಯರ ತೂಕ ಹೆಚ್ಚೋದಕ್ಕೆ ಇದೂ ಒಂದು ಕಾರಣ… ಉಳಿದ ಕಾರಣಗಳು ಹೀಗಿವೆ…

  • ಮನೆಯಲ್ಲೇ ಕುಳಿತು ಟಿವಿ ನೋಡೋದು ಅಥವಾ ಟೈಮ್ ಪಾಸ್ ಮಾಡೋ ವೇಳೆ ನೀವು ಎಷ್ಟು ತಿಂದಿದ್ದೀರ ಎನ್ನೋದೆ ನಿಮಗೆ ತಿಳಿಯೋದಿಲ್ಲ. ಚಿಪ್ಸ್ ಪ್ಯಾಕೆಟ್ ಖಾಲಿ ಆದಮೇಲೆಯೇ ಅದು ಖಾಲಿಯಾಗಿದೆ ಎನ್ನೋದು ತಿಳಿಯುತ್ತದೆ.
  • ಕೆಲವೊಮ್ಮೆ ಸರಿಯಾದ ಸಮಯಕ್ಕೆ ತಿನ್ನದೇ ಗ್ಯಾಸ್ಟ್ರಿಕ್ ಆಗಿಯೂ ಹೊಟ್ಟೆ ಊದಿದಂತೆ ಕಾಣುತ್ತದೆ.
  • ಕೆಲಸ ಮುಗಿಸಿದ ನಂತರ ಮನೆಯಲ್ಲೇ ಇದ್ದು ಬೋರ್ ಆಗಿ ಒಂದೆರಡು ರೌಂಡ್ ನಿದ್ದೆ ಕೂಡ ಮಾಡುವುದು ತೂಕ ಹೆಚ್ಚಳಕ್ಕೆ ಕಾರಣ.
  • ಮನೆಯಲ್ಲೇ ಇರುವ ಕಾರಣ ಬೋರಾಗಿ ಹೆಚ್ಚು ತಿನ್ನೋದು ಜೊತೆಗೆ ಟೀ, ಕಾಫಿ, ಮನೆಯವರಿಗಾಗಿ ಸ್ಪೆಷಲ್ ತಿಂಡಿ ಮಾಡಿ ತಿನ್ನೋದು.
  • ಮನೆಕೆಲಸದ ಚಿಂತೆ ಇರೋ ಕಾರಣ ಹೆಚ್ಚಾಗಿ ದೇಹಕ್ಕೆ ಅಲ್ಲೇ ವ್ಯಾಯಾಮ ಆಗುತ್ತದೆ ಎಂದು ಬೇರೆ ವ್ಯಾಯಾಮ, ಯೋಗ ಮಾಡದೇ ಇರುವುದು.
  • ವೇಸ್ಟ್ ಆಗುತ್ತದೆ ಎನ್ನುವ ಕಾರಣಕ್ಕೆ ಉಳಿದದ್ದೆಲ್ಲಾ ತಿಂದು ಹೊಟ್ಟೆ ಡಸ್ಟ್‌ಬಿನ್ ಮಾಡಿಕೊಳ್ಳುವುದು.
  • ಹೆಚ್ಚಿನ ಸಮಯ ದೇಹ ದಂಡಿಸದೇ ಮೊಬೈಲ್,ಟಿವಿಯೊಳಗೆ ಮುಳುಗಿರೋದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss