ಸೋಲಿನ ಬೆನ್ನಲ್ಲೇ ವಿಂಡೀಸ್‌ ತಂಡದಿಂದ ಹೊರಬಿದ್ದ ಸ್ಟಾರ್‌ ಆಲ್ರೌಂಡರ್.. ಪೂರನ್‌ ಬಳಗಕ್ಕೆ ಮತ್ತೊಂದು ಆಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾಸಿ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ವೆಸ್ಟ್ ಇಂಡೀಸ್  ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್‌ ಆಲ್ರೌಂಡರ್‌ ಜೇಸನ್‌ ಹೋಲ್ಡರ್‌ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಬ್ಯಾಟಿಂಗ್‌ – ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಶಕ್ತಿಯಾಗಿ ಗುರುತಿಸಿಕೊಂಡಿರುವ  ಜೇಸನ್ ಹೋಲ್ಡರ್ ಮುಂದಿನ ಪಂದ್ಯಗಳಿಂದ ಹೊರಕ್ಕೆ ಉಳಿಯುವ ಸ್ಥಿತಿ ನಿರ್ಮಾಣವಾದೆ. ಹೋಲ್ಡರ್‌ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರು ತಮ್ಮ ತಂಡದ ಇತರ ಆಟಗಾರರಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಅದೇ ಕಾರಣಕ್ಕೆ ಪ್ರಥಮ ಪಂದ್ಯದಲ್ಲಿ ಆಡುವುದನ್ನು ತಪ್ಪಿಸಿಕೊಂಡಿದ್ದರು. ಭಾರತ- ವಿಂಡೀಸ್‌ ಎರಡನೇ ಏಕದಿನ ಪಂದ್ಯ ಜುಲೈ 24ರಂದು(ಭಾನುವಾರ) ನಡೆಯಲಿದೆ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಜುಲೈ 27ರಂದು ನಡೆಯಲಿದೆ. ಟೀಂ ಇಂಡಿಯಾ ವಿರುದ್ಧ ಆಡಿದ 25 ಪಂದ್ಯಗಳಲ್ಲಿ 450 ರನ್‌ ಜೊತೆಗೆ 23 ವಿಕೆಟ್‌ ಕಬಳಿಸಿರುವ ಹೋಲ್ಡರ್‌ ಅನುಪಸ್ಥಿತಿ ವಿಂಡೀಸ್‌ ತಂಡಕ್ಕೆ ಕಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!