ದಿಗಂತ ವರದಿ ಕಲಬುರಗಿ:
ಕಲಬುರಗಿ ಹಾಗೂ ಬೀದರ್ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸೆ.2ರ ಸೋಮವಾರ (ಇಂದು) ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಆಯಾ ಜಿಲ್ಲೆಗಳ ಡಿಡಿಪಿಐ,ಗಳು ಸದರಿ ದಿನದ ಶೈಕ್ಷಣಿಕ ಕೊರತೆಯನ್ನು (ಭೋಧನೆ/ಕಲಿಕೆ) ನೀಗಿಸಲು ಮುಂದಿನ 2 ಶನಿವಾರಗಳಂದು ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಲು ಮುಖ್ಯಗುರುಗಳು ಕ್ರಮವಹಿಸಬೇಕು ಎಂದು ಆದೇಶದ ಪತ್ರದಲ್ಲಿ ತಿಳಿಸಿದ್ದಾರೆ.