Saturday, April 1, 2023

Latest Posts

ಅಯ್ಯಯ್ಯೊ…ಮನೆಗೆ ಬಾ ಅಂದಿದ್ದಕ್ಕೆ ಗಂಡನ ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಂಡ ಹೆಂಡತಿ ಜಗಳ ಸಾಮಾನ್ಯ. ದಂಪತಿ ನಡುವೆ ಆಗಾಗ ಜಗಳಗಳು ನಡೆಯುತ್ತಿರುತ್ತವೆ. ಆದರೆ ಅದು ಸ್ವಲ್ಪ ಸಮಯದ ಬಳಿಕ ಎಲ್ಲವನ್ನೂ ಮರೆತು ಮತ್ತೆ ಒಂದಾಗುತ್ತಾರೆ. ಅದು ಬಂಧ, ಪ್ರೀತಿ, ವಿಶ್ವಾಸ, ನಂಬಿಕೆ. ಆದರೆ, ಕೆಲವು ಸಂದರ್ಭಗಳಲ್ಲಿ ಪತಿ-ಪತ್ನಿಯ ನಡುವೆ ಜಗಳ ಅತಿರೇಕಕ್ಕೆ ಹೋಗಿ ಅನಾರ್ಥಗಳಿಗೆ ಕಾರಣವಾಗುತ್ತದೆ. ಇಂಥದ್ದೇ ಘಟನೆ ಪತಿಯೊಂದಿಗೆ ಜಗಳವಾಡಿ ಕೋಪಗೊಂಡ ಪತ್ನಿ ಪತಿಯ ನಾಲಿಗೆಯನ್ನು ಕಚ್ಚಿದ್ದಾಳೆ.

ಉತ್ತರಪ್ರದೇಶದ ಠಾಕೂರ್‌ಗಂಜ್‌ನ ಸಲ್ಮಾ ಮತ್ತು ಮುನ್ನಾ ದಂಪತಿಗಳ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಗೆ ತೆರಳಿದ್ದಾಳೆ. ಮನೆಗೆ ಹಿಂದಿರುಗುವಂತೆ ಪತಿ ಹೇಳಿದ್ದಕ್ಕೆ ಈ ವಿಚಾರವಾಗಿ ಇಬ್ಬರ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದೆ. ಈ ಕ್ರಮದಲ್ಲಿ ಇಬ್ಬರ ಜಗಳ ದೊಡ್ಡದಾಗಿ ಕೋಪಗೊಂಡ ಪತ್ನಿ ಪತಿಯ ನಾಲಿಗೆಯನ್ನು ಹಿಡಿದು ಕಚ್ಚಿದ್ದಾಳೆ.

ಪತಿಯ ನಾಲಿಗೆ ನೆಲದ ಮೇಲೆ ಬೀಳುವಷ್ಟು ಬಲವಾಗಿ ಕಚ್ಚಿದ್ದಾಳೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪತಿಯನ್ನು ಮುನ್ನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು.. ಪತ್ನಿ ಸಲ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!