ಹೆಂಡತಿ ಬೇರೊಬ್ಬನ ಜೊತೆ ಹೋಗಿದ್ದಾಳೆ, ಹುಡುಕಿಕೊಡಿ: ಬೆಂಗ್ಳೂರು ಪೊಲೀಸರಿಗೆ ದೆಹಲಿಯ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನನ್ನ ಪತ್ನಿ‌ ಬೇರೊಬ್ಬನ ಜೊತೆ ಬೆಂಗಳೂರಿಗೆ ಹೋಗಿದ್ದಾಳೆ, ಆಕೆಯನ್ನು ಹುಡುಕಿಕೊಡಿ ಎಂದು ವ್ಯಕ್ತಿಯೋರ್ವ ಬೆಂಗಳೂರು ಪೊಲೀಸರಿಗೆ ಟ್ವೀಟ್ ಮೂಲಕ ಮನವಿ ಮಾಡಿದ ವಿಲಕ್ಷಣ ಘಟನೆ ನಡೆದಿದೆ. ತನ್ನ ಹೆಸರು ಅನುರೋದ್, ದೆಹಲಿ‌ ಮೂಲದವ ಎಂದು ಟ್ವೀಟ್ ಮಾಡಿರುವ ಆತ ವಿವರಗಳನ್ನು ಬರೆದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ನನ್ನ ಪತ್ನಿ ಇಬ್ಬರು ಮಕ್ಕಳನ್ನು ತೊರೆದು ಬೇರೊಬ್ಬನೊಂದಿಗೆ ದೆಹಲಿ ಬಿಟ್ಟು ಬೆಂಗಳೂರಿಗೆ ಹೋಗಿದ್ದಾಳೆ. ಬಲವಂತವಾಗಿ ಆಕೆಯನ್ನು ಕರೆದೊಯ್ಯಲಾಗಿದೆ. ದಯವಿಟ್ಟು ನನ್ನ ಪತ್ನಿಯನ್ನು ಹುಡುಕಿಕೊಡಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಾನು ಪತ್ನಿ, ಮಗುವಿನ ಜೊತೆಗಿರುವ ಫೋಟೋ ಹಾಗೂ ಪತ್ನಿಯನ್ನು ಕರೆದೊಯ್ದಾತ ಎಂದು ಅರೋಪಿಸುವ ವ್ಯಕ್ತಿಯ ಫೋಟೋವನ್ನು ಕೂಡಾ ಟ್ವೀಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದಕ್ಕೆ ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಸಮೀಪದ ಪೊಲೀಸ್ ಠಾಣೆಗೆ ವಿವರಗಳೊಂದಿಗೆ ಮೊದಲು ದೂರು ನೀಡಿ. ನಮ್ಮ ತನಿಖೆಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!