ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವ ವಿಷಯಕ್ಕೆ ಗಂಡ ಹೆಂಡತಿ ಜಗಳ ಆರಂಭವಾಗುತ್ತದೋ, ಯಾವ ಜಗಳ ಯಾವ ಫಿಸಿಕಲ್ ವೈಲೆನ್ಸ್ ಆಗಿ ಬದಲಾಗುತ್ತದೋ ಗೊತ್ತಾಗೋದೇ ಇಲ್ಲ. ಇಲ್ಲೊಬ್ಬ ಪತಿರಾಯ ತನ್ನ ಪತ್ನಿಯನ್ನು ಮಧ್ಯರಾತ್ರಿ ಎಬ್ಬಿಸಿ ಮಟನ್ ಸಾಂಬಾರ್ ಮಾಡುವಂತೆ ಕೇಳಿದ್ದಾನೆ. ಪತ್ನಿ ಒಪ್ಪದ್ದಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ.
ತೆಲಂಗಾಣದ ಮಹಬೂಬಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಮಾಲೋತ್ ಕಲಾವತಿ (35) ಕೊಲೆಯಾದ ಪತ್ನಿ. ತಡರಾತ್ರಿ ಕಲಾವತಿ ಬಳಿ ಮಟನ್ ಸಾರು ಮಾಡುವಂತೆ ಪತಿ ಹೇಳಿದ್ದಾನೆ. ಕಲಾವತಿ ಸಾರು ಮಾಡಲು ನಿರಾಕರಿಸಿದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಯಾರೂ ಇಲ್ಲದಿದ್ದಾಗ ನಡೆದ ಜಗಳದಲ್ಲಿ ಕಲಾವತಿಯನ್ನು ಪತಿ ಹಲ್ಲೆ ಮಾಡಿ ಕೊಂದಿದ್ದಾನೆ ಎಂದು ಕಲಾವತಿ ತಾಯಿ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ