ಪತ್ನಿಯ ಹುಟ್ಟುಹಬ್ಬ: ವಂಚಕ ಸುಕೇಶ್ ಚಂದ್ರಶೇಖರ್ ಗೆ ಕೇಕ್ ಖರೀದಿಸಲು ಅನುಮತಿ ನೀಡಿದ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಪತ್ನಿಯ ಹುಟ್ಟುಹಬ್ಬಕ್ಕಾಗಿ ಜೈಲಿನ ಬೇಕರಿಯಲ್ಲಿ ಕೇಕ್ ಖರೀದಿಸಲು ಯಾಲಯವು ಅನುಮತಿ ನೀಡಿದೆ .

ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತು ಹಲವಾರು ಜನರನ್ನು ವಂಚಿಸಿದ ಆರೋಪದ ಮೇಲೆ ದಂಪತಿ ಇಬ್ಬರು ಮಂಡೋಲಿ ಜೈಲು ಪಾಲಾಗಿದ್ದಾರೆ. ಏಪ್ರಿಲ್ 28 ರಂದು ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಪೌಲೋಸ್ ಅವರಿಗೆ ಕೇಕ್ ಹಸ್ತಾಂತರಿಸುವಂತೆ ಮಂಡೋಲಿ ಜೈಲಿನ ಅಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿದೆ. ಸುಕೇಶ್ ಚಂದ್ರಶೇಖರ್ ಮನವಿಯು ‘ಯಾವುದೇ ಕಾನೂನಾತ್ಮಕ ಅಂಶಗಳಿಗಿಂತ ಮಾನವನ ಭಾವನೆಯ ಮೇಲೆ ಹೆಚ್ಚು’ ಎಂದು ಕೇಂದ್ರೀಕೃತವಾಗಿದೆ ಎಂಬುದನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಶೈಲೇಂದರ್ ಮಲಿಕ್, ‘ಅದು ಹೇಗಿದೆಯೋ ಹಾಗೆಯೇ ಇರಲಿ, ವಿಚಾರಣಾಧೀನ ಕೈದಿಯು ಆತನ ಕುಟುಂಬ ಸದಸ್ಯರು ಅಥವಾ ಸಂಬಂಧಿಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಲು ಅವಕಾಶವನ್ನು ನೀಡಬೇಕಾಗಿದೆ’ ಎಂದಿದ್ದಾರೆ.

ಸುಕೇಶ್ ಚಂದ್ರಶೇಖರ್ ಅವರು ತಮ್ಮ ಖೈದಿಗಳ ನಿಧಿಯಿಂದ ಮಂಡೋಲಿ ಜೈಲಿನ ಬೇಕರಿಯಿಂದಲೇ ಕೇಕ್ ಅನ್ನು ಖರೀದಿಸಲು ಪ್ರಯತ್ನಿಸುತ್ತಿರುವುದರಲ್ಲಿ ನನಗೆ ಯಾವುದೇ ಅಡ್ಡಿ ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!