ಹೊಸದಿಗಂತ ವರದಿ, ಹಾಸನ/ಆಲೂರು :
ತಾಲೂಕಿನ ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಪುರ ದಾಖಲೆ ಬಲ್ಲೂರುಪುರ ಗ್ರಾಮದ ಚಂದ್ರಪ್ಪ ಅವರ ಮಗ ಕಾಂತರಾಜ್ ಎಂಬವರಿಗೆ ಸೇರಿದ 2 ಎಕರೆ ಹೊಲದಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳದ ಬೆಳೆಯನ್ನು ಮಂಗಳವಾರ ಬೆಳಗಿನ ಜಾವಾ ಕಾಡಾನೆಗಳ ಗುಂಪು ನಾಶಪಡಿಸಿವೆ.
ಸಾವಿರಾರು ರೂ ಖರ್ಜು ಮಾಡಿ ಬಿತ್ತನೆ ಬೀಜ,ಗೊಬ್ಬರ, ಬೇಸಾಯ ಮಾಡಿ ಮೆಕ್ಕೆಜೋಳದ ಬೆಳೆ ಬೆಳೆದಿದ್ದ ರೈತ ಕಾಂತರಾಜ್ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಕಾಡಾನೆಗಳಿಂದ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಕಾಂತರಾಜ್ ಅವರಿಗೆ ದಿಕ್ಕು ತೋಚದಂತಾಗಿದೆ ಅರಣ್ಯ ಇಲಾಖೆಯವರು ಪರಿಹಾರ ನೀಡಬೇಕು ಎನ್ನುವುದು ರೈತ ಕಾಂತರಾಜ್ ಆಗ್ರಹವಾಗಿದೆ.
ವಿಷಯ ತಿಳಿದ ಶಾಸಕ ಸಿಮೆಂಟ್ ಮಂಜು ಕಾಂತರಾಜು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ನಂತರ ಮಾತನಾಡಿದ ಶಾಸಕರು ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಕಾಡಾನೆ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನಸಾಮಾನ್ಯರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾಡಾನೆ ಉಪಟಳದ ಜೊತೆಗೆ ಆಲೂರು ತಾಲ್ಲೂಕಿನ ಕೆಲವು ಭಾಗದಲ್ಲಿ ಚಿರತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಜಾನುವಾರುಗಳ ಮೇಲೆ ದಾಳಿ ಮಾಡುವುದನ್ನ ಇತ್ತೀಚಿನ ದಿನಗಳಲ್ಲಿ ಕೇಳುತ್ತಿದ್ದೇವೆ ಜನರು ಅತಂಕದಲ್ಲಿ ಬದುಕುವಂತಾಗಿದೆ ಅದರಲ್ಲಿ ಸರ್ಕಾರ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ರಾತ್ರಿ ವೇಳೆ ಕರೆಂಟ್ ನೀಡುತ್ತಿದೆ ರೈತರು ಬೆಳೆಗಳಿಗೆ ನೀರು ಹಾಯಿಸಲು ರಾತ್ರಿ ಹೊತ್ತು ಬರಬೇಕಾದ ಅನಿವಾರ್ಯತೆಯಿದೆ ರಾತ್ರಿ ವೇಳೆ ಕಾಡಾನೆಗಳ ಜೊತೆಯಲ್ಲಿ ಬದುಕು ಸಾಗಿಸುವಂತಾಗಿದೆ ಅದ್ದರಿಂದ ಹಗಲು ವೇಳೆ ಕರೆಂಟ್ ನೀಡಬೇಕು ಎಂದು ಒತ್ತಾಯಿಸಿದರಲ್ಲದೇ ಅರಣ್ಯ ಇಲಾಖೆ ದಾಳಿಗೊಳಗಾದ ರೈತರ ಜಮೀನುಗಳಿಗೆ ತೆರಳಿ ಹೆಚ್ಚು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ,ಜಿಲ್ಲಾ ಬಿಜೆಪಿ ಯುವಮೊರ್ಚಾ ಕಾರ್ಯದರ್ಶಿ ಶಶಿಧರ್,ಕುಂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಕಾಸ್,ಬಿಜೆಪಿ ಮುಖಂಡ ಚೇತನ್ ಸೇರಿದಂತೆ ಶಾಸಕರ ಜೊತೆ ಇದ್ದರು.