ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ: ಪತಿ ಕೊಹ್ಲಿಗೆ ಅನುಷ್ಕಾ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಶತಕ ಸಾಧನೆ ಮಾಡಿದ್ದಾರೆ. 1000ಕ್ಕೂ ಹೆಚ್ಚು ದಿನಗಳ ಬಳಿಕ ವಿರಾಟ್​ ಬತ್ತಳಿಕೆಯಿಂದ ಬಂದ ಶತಕವನ್ನು ಪತ್ನಿ ಅನುಷ್ಕಾ ಹಾಗೂ ಮಗಳಿಗೆ ಅರ್ಪಿಸಿದ್ದಾರೆ.

ಶತಕ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಸಂಭ್ರಮಿಸಿದ್ದ ವಿರಾಟ್​, ಕೊರಳಲ್ಲಿ ಧರಿಸಿದ್ದ ಸರಕ್ಕೆ ಜೋಡಿಸಿರುವ ನಿಶ್ಚಿತಾರ್ಥದ ಉಂಗುರಕ್ಕೆ ಮುತ್ತಿಟ್ಟಿದ್ದರು. ಈ ವಿಡಿಯೋ ವೈರಲ್​ ಆಗಿತ್ತು.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಕೊಹ್ಲಿ, ಕಷ್ಟದ ಸಂದರ್ಭಗಳಲ್ಲಿ ಪತ್ನಿ ಅನುಷ್ಕಾ ಶರ್ಮಾ ನನ್ನ ಜೊತೆಗಿದ್ದರು. ಈ ಶತಕ ಆಕೆಗೆ ಮತ್ತು ಮಗಳು ವಮಿಕಾಗೆ ಅರ್ಪಿಸುತ್ತೇನೆ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ, ಇನ್​​ಸ್ಟಾಗ್ರಾಮ್​​ನಲ್ಲಿ ವಿರಾಟ್​​ ಕೊಹ್ಲಿಯ ಕೆಲವು ಚಿತ್ರಗಳನ್ನು ಶೇರ್ ಮಾಡಿಕೊಂಡಿರುವ ಅನುಷ್ಕಾ, ಎಲ್ಲಾ ಸಂದರ್ಭಗಳಲ್ಲೂ ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ , ಹೃದಯದ ಇಮೋಜಿ ಹಾಕಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!