ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲ ತೆಲಗು, ತಮಿಳು,ಹಿಂದಿ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಇದೀಗ ಮತ್ತೆ ಬಾಲಿವುಡ್ ನ ಸಿನಿಮಾ ಒಂದಕ್ಕೆ ಆಫರ್ ಬಂದಿದೆಯಂತೆ.
ಹೌದು… 2019ರಲ್ಲಿ ತೆರೆಗೆ ಬಂದ ‘ದಬಂಗ್ 3’ ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ನಟ ಸುದೀಪ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಬಾಲಿವುಡ್ ಸಿನಿಮಾವೊಂದಕ್ಕೆ ಸುದೀಪ್ ಬಣ್ಣ ಹಚ್ಚಲಿದ್ದು, ಸೈಫ್ ಅಲಿ ಖಾನ್ ತಮ್ಮನಾಗಿ ಅಭಿನಯಿಸಲಿದ್ದಾರೆ.
ಆದರೆ ಯಾವ ಸಿನಿಮಾ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಂದಿಲ್ಲ. ಒಟ್ಟಿನಲ್ಲಿ ಸುದೀಪ್ ಮತ್ತು ಸೈಫ್ ಅಲಿ ಖಾನ್ ಅಣ್ಣ-ತಮ್ಮ ಆಗುತ್ತಿರುವುದಂತು ನಿಜ.