spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಮೆರಿಕದಲ್ಲಿ ಮನೆ ಕಳೆದುಕೊಳ್ಳಲಿದ್ದಾರೆಯೇ ಲಕ್ಷಾಂತರ ಜನ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಮೆರಿಕದಲ್ಲಿ ಮನೆ ಬಾಡಿಗೆ ನೀಡಿದ ಯಜಮಾನರೆಲ್ಲ ಭಾನುವಾರದಿಂದ ಬಿಗುನಿಲುವು ತಾಳಿದ್ದೇ ಆದರೆ ಲಕ್ಷಾಂತರ ಮಂದಿ ಮನೆ ಕಳೆದುಕೊಳ್ಳಲಿದ್ದಾರೆ. ಏನಿದು, ಅಮೆರಿಕದಲ್ಲೂ ಹೀಗೆಲ್ಲ ಆಗುವ ಸಂಭವ ಇದೆಯಾ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಇಲ್ಲಿದೆ ವಿವರಣೆ.

ಅಮೆರಿಕದ ಇಕಾನಮಿ ಎಷ್ಟೇ ಶ್ರೀಮಂತವಾಗಿದ್ದರೂ ಜನರ ಜೀವನ ನಡೆಯುತ್ತಿರುವುದು ಮಾಸಿಕ ಕಂತುಗಳ ಇಎಂಐ ಮಾದರಿಯಲ್ಲೇ. ಕರೋನಾ ಅಪ್ಪಳಿಸಿದಾಗ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. ಸಹಜವಾಗಿಯೇ ಮನೆ ಬಾಡಿಗೆಯನ್ನೋ, ಸಾಲದ ಕಂತುಗಳನ್ನೋ ತುಂಬದಾದರು. ಆದರೆ ಇವರನ್ನೆಲ್ಲ ಮನೆಯಿಂದ ಹೊರಹಾಕದಂತೆ ಅಮೆರಿಕ ಸರ್ಕಾರ ಆದೇಶ ತಂದಿತಲ್ಲದೇ, ಮನೆ ಮಾಲೀಕರಿಗೆ ಬಿಲಿಯನ್ ಗಟ್ಟಲೇ ಡಾಲರ್ ಪರಿಹಾರ ನೀಡಿತು.

ಈಗೇನಾಗಿದೆ ಎಂದರೆ- ಆ ಆದೇಶದ ಅವಧಿಯೂ ಮುಗಿದಿದೆ. ಮನೆ ಮಾಲೀಕರಿಗೆ ಸರ್ಕಾರದಿಂದ ಘೋಷಣೆಯಾಗಿರರುವ ಹಣವೂ ಮುಟ್ಟಿಲ್ಲ. ಏಕೆಂದರೆ ಹಣವನ್ನು ಮುಟ್ಟಿಸಬೇಕಿದ್ದ ಸ್ಥಳೀಯ ಸರ್ಕಾರಗಳು ವಿಫಲವಾಗಿವೆ. ಬಿಡೆನ್ ಆಡಳಿತವೀಗ ಸ್ಥಳೀಯ ಆಡಳಿತವನ್ನು ದೂರುತ್ತಿದೆ. ಪರಿಸ್ಥಿತಿ ಅಯೋಮಯವಾಗಿದೆ.

ಬಿಡೆನ್ ಅಧಿಕಾರ ವಹಿಸಿಕೊಂಡ ಮೂರು ವಾರದೊಳಗೆ ರಾಜ್ಯಗಳು ಮತ್ತು ಸ್ಥಳೀಯ ಪ್ರದೇಶಗಳಿಗೆ 25  ಬಿಲಿಯನ್ ಡಾಲರ್ ಕಳುಹಿಸಲಾಗಿತ್ತು. ಆದರೆ ಕೇವಲ 3 ಬಿಲಿಯನ್ ಡಾಲರ್ ಮಾತ್ರ ಜನರನ್ನು ತಲುಪಿದೆ ಎಂದು ಖಜಾನೆ ಇಲಾಖೆ ಮಾಹಿತಿ ನೀಡಿದೆ.

ಜನರನ್ನು ಮನೆಯಿಂದ ಹೊರಹಾಕಿದರೆ ಸಮಸ್ಯೆಗಳ ಸಾಗರವನ್ನೇ ಎದುರಿಸಬೇಕಾಗುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಅನ್ವಯ ಹೆಚ್ಚು ಜನರಿಗೆ ಮನೆ ಇಲ್ಲದೇ ಹೋದರೆ ಮತ್ತೆ ಕೊರೋನಾ ಭೀತಿ ಎದುರಾಗಲಿದೆ. ಈಗಾಗಲೇ ಕೊರೋನಾ ಕಾರಣದಿಂದ 20 ಮಿಲಿಯನ್ ಮಂದಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಕೆಲಸದ ಜೊತೆಗೆ ತಮ್ಮ ಮನೆಗಳನ್ನು ಕಳೆದುಕೊಳ್ಳುವ ಭೀತಿ ಜನರಲ್ಲಿ ಎದುರಾಗಿದೆ ಎಂದು ಮಾಹಿತಿ ನೀಡಿದೆ.

ಕೊರೋನಾದಿಂದ ರಾಷ್ಟ್ರ ಚೇತರಿಸಿಕೊಂಡ ಬೆನ್ನಲ್ಲೇ 10 ಮಿಲಿಯನ್ ಮಂದಿ ತಮ್ಮ ಕೆಲಸವನ್ನು ಮತ್ತೆ ಪಡೆದಿದ್ದಾರೆ. ಮನೆ ಬಾಡಿಗೆ ಮುಂದಿನ ತಿಂಗಳು ನೀಡುತ್ತೇನೆ ಎಂದು ಹೇಳಿದವರು ಇದುವರೆಗೂ ಸಂಪೂರ್ಣ ಬಾಡಿಗೆ ನೀಡಲು ಆಗಿಯೇ ಇಲ್ಲ.

ಸೆನ್ಸಸ್ ಬ್ಯೂರೋ ಹೌಸ್‌ಹೋಲ್ಡ್ ಪಲ್ಸ್ ಸರ್ವೆ ನಡೆಸಿದ್ದು, ಜುಲೈ ಮೊದಲ ವಾರದಲ್ಲಿ 51 ಮಿಲಿಯನ್ ಬಾಡಿಗೆದಾರರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 3.4 ಮಿಲಿಯನ್ ಮಂದಿ ತಮ್ಮ ತಿಂಗಳ ಬಾಡಿಗೆ ಸರಿಯಾಗಿ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ. ಇದರಲ್ಲಿ ಅರ್ಧ ಮಂದಿ ಇನ್ನೇನು ಎರಡು ತಿಂಗಳಲ್ಲಿ ನಮ್ಮನ್ನು ಮನೆ ಬಿಟ್ಟು ಓಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪರಿಹಾರ ಏನು?
ಜೂನ್ ಅಂತ್ಯದ ವೇಳೆಗೆ ಸುಮಾರು 450,000 ಮನೆಗಳು ಮಾತ್ರ ತುರ್ತು ಬಾಡಿಗೆ ಸಹಾಯ ಕಾರ್ಯಕ್ರಮದ ಮೂಲಕ ನೆರವು ಪಡೆದಿವೆ. ಕೆಲವು ರಾಜ್ಯಗಳು ಇನ್ನೂ ಯಾವುದೇ ಹಣವನ್ನು ಪಾವತಿಸಿಲ್ಲ ಎಂದು ಖಜಾನೆ ಮಾಹಿತಿ ನೀಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss