Theatre Story:ಅತ್ತೆ ಮತ್ತು ಸಿಎಸ್‌ ಹಾಕೀರೋ ಪಂದ್ಯದಲ್ಲಿ ಗೆಲ್ತಾಳ ನಕ್ಷತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಪ್ರತಿಯೊಂದು ಧಾರವಾಹಿಗಳು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಿವೆ. ಈ ಪೈಕಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮತ್ತು 200 ಸಂಚಿಕೆಗಳನ್ನು ದಾಟಿ ಮುನ್ನುಗ್ಗುತ್ತಿರುವ ʼಲಕ್ಷಣʼ ಧಾರವಾಹಿ ಇದೀಗ ಪ್ರೇಕ್ಷಕರನ್ನು ಮತ್ತಷ್ಟು ಮೋಡಿ ಮಾಡಿದೆ.

ಧಾರವಾಹಿಯಲ್ಲಿ ಭೂಪತಿಯ ಪತ್ನಿಯಾಗಿರುವ ನಕ್ಷತ್ರ ಭೂಪತಿಗೆ ಸೂಕ್ತಳಾದವಳಲ್ಲ ಮತ್ತು ಶ್ವೇತಾ ಈ ಮನೆಗೆ ಸೂಕ್ತಳಾದ ಸೊಸೆ ಎಂಬ ಭೂಪತಿ ತಾಯಿ ಶಕುಂತಲಾದೇವಿಯ ಹೇಳಿಕೆಗೆ ನಕ್ಷತ್ರಾಳ ತಂದೆ ಉದ್ಯಮಿ ಸಿ.ಎಸ್‌ ಚಂದ್ರಶೇಖರ್‌ ಸವಾಲನ್ನು ಒಡ್ಡಿದ್ದಾರೆ. ಕೇವಲ ೫೦೦ ರೂ ನಗದು ಬಳಸಿ ಒಂದು ದಿನಕ್ಕೆ ಮನೆಯನ್ನು ಶ್ವೇತಾ ಮತ್ತು ನಕ್ಷತ್ರ ಇವರಿಬ್ಬರಲ್ಲಿ ಯಾರು ಸಂಬಳಿಸುತ್ತಾರೋ ಅವರೇ ಈ ಮನೆಗೆ ತಕ್ಕ ಸೊಸೆ ಎಂಬ ಪಂದ್ಯವನ್ನು ಅವರು ಮುಂದಿಟ್ಟಿದ್ದಾರೆ.

ಈ ವಾರದ ಸಂಚಿಕೆಯು ವೀಕ್ಷಿಕರ ಕುತೂಹವನ್ನು ಹೆಚ್ಚಿಸಿದ್ದರು, ಈ ಪಂದ್ಯದಲ್ಲಿ ಯಾರು ವಿಜಯಶಾಲಿಯಾಗುತ್ತಾರೆ ಮತ್ತು ಯಾರು ಶಕುಂತಲಾದೇವಿಗೆ ತಕ್ಕ ಸೊಸೆ ಎಂದು ನಿರ್ಧಾರವಾಗುತ್ತೆ ಎಂದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!