ನೀವು ಕೂಡ ಇದನ್ನು ಗಮನಿಸಿರುತ್ತೀರಾ.. ಮನೆ ಒಳಗೆ ನೀವು ಉಗುರು ಕತ್ತರಿಸುತ್ತಿದ್ದರೆ ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರೆ ಮನೆಯ ಹೊರಗೆ ಹೋಗಿ ಉಗುರು ಕತ್ತರಿಸುವಂತೆ ಹೇಳುತ್ತಾರೆ. ಕಾರಣ ಕೇಳಿದರೆ ಮನೆ ಒಳಗೆ ಉಗುರು ಕತ್ತರಿಸಿದರೆ ಬಡತನ ಬರುತ್ತದೆ ಎನ್ನುತ್ತಾರೆ.
ಆದರೆ ಕಾರಣ ಬೇರೆಯೇ ಇದೆ. ಮನೆಯ ಒಳಗೆ ಉಗುರು ಕತ್ತರಿಸಿದರೆ, ನಿಮಗೆ ಗೊತ್ತಾಗದೇ ಉಗುರು ಎಲ್ಲಾದರೂ ಬೀಳುವ ಸಾಧ್ಯತೆ ಇರುತ್ತದೆ. ಆಹಾರದ ಜೊತೆ ಹೊಟ್ಟೆ ಸೇರಿದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ನಂತರ ಆರೋಗ್ಯ ಸರಿಪಡಿಸಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿಯೇ ಮನೆಯೊಳಗೆ ಉಗುರು ಕತ್ತರಿಸಬಾರದು ಎನ್ನುತ್ತಾರೆ.