ಹೊಸದಿಗಂತ ಡಿಜಿಟಲ್ ಡೆಸ್ಕ್ :
ತಮಿಳು ನಟ ದಳಪತಿ ವಿಜಯ್ (Dalpati Vijay) ಜೊತೆ ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಮಾಡಲಿದ್ದಾರೆ ಎನ್ನುವ ವಿಚಾರ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದ್ದು, ಇದರ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾತ್ರವಲ್ಲ, ಬಾಲಿವುಡ್ ನಿಂದ ಸಂಜಯ್ ದತ್, ತಮಿಳಿನ ಮತ್ತೋರ್ವ ಹೆಸರಾಂತ ನಟ ಕಮಲ್ ಹಾಸನ್ ಕೂಡ ಇರಲಿದ್ದಾರೆ ಎನ್ನುವುದು ಭಾರೀ ಸುದ್ದಿಗೆ ವೈರಲ್ ಆಗಿತ್ತು.
ಆದ್ರೆ ಈ ಬಗ್ಗೆ ಎಷ್ಟು ದಿನ ಮೌನವಾಗಿದ್ದ ರಕ್ಷಿತ್ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಇದಕ್ಕೊಂದು ಉತ್ತರ ನೀಡಿದ್ದಾರೆ.
ದಳಪತಿ ವಿಜಯ್ ಜೊತೆ ನಾನು ಸಿನಿಮಾ ಮಾಡುತ್ತಿಲ್ಲ ಎನ್ನುವ ವಿಚಾರವನ್ನು ಸಿಂಪಲ್ ಆಗಿ ಹೇಳದೇ ನಾಲ್ಕು ಪ್ರಾಜೆಕ್ಟ್ ಕಾರಣದಿಂದಾಗಿ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಆತಂಕ ಮೂಡುವಂತೆ ಮಾಡಿದ್ದಾರೆ.
ಅಭಿಮಾನಿಗಳು ಸಿನಿಮಾಗಳು ಯಾವಾಗಲೂ ಇದ್ದದ್ದೆ, ಆರೋಗ್ಯ ನೋಡಿಕೊಳ್ಳಿ. ಚೆನ್ನಾಗಿ ಮಲಗಿ ಎಂದು ಹೇಳುವಂತೆ ಅಷ್ಟುದ್ದ ಸಿನಿಮಾ ಯಾದಿಯನ್ನು ನೀಡಿದ್ದಾರೆ.
ರಕ್ಷಿತ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಸದ್ಯ, ಸಪ್ತ ಸಾಗರದಾಚೆ ಎಲ್ಲೊ (SSE)ಸಿನಿಮಾ ಕೆಲಸ ಮುಗಿಸಬೇಕಿದೆ. ಅದು ತೆರೆಗೆ ಬರಬೇಕಿದೆ. ನಂತರ ರಿಚರ್ಡ್ ಆಂಟನಿ (RA) (Richard Antony), ಆನಂತರ ಪುಣ್ಯಕೋಟಿ (Punyakoti) ಪಾರ್ಟ್ 1 ಮತ್ತು ಪಾರ್ಟ್ 2 (PK 1 And 2) ಇದು ಮುಗಿದ ಮೇಲೆ ಮಿಡ್ ವೇ ಟು ಮೋಕ್ಷ (M2M) ಸಿನಿಮಾ ಮಾಡಬೇಕಿದೆಯಂತೆ. ಈ ನಾಲ್ಕು ಸಿನಿಮಾಗಳ ಮಧ್ಯೆ ಬೇರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ತಮಿಳು ಸಿನಿಮಾವನ್ನು ನಿರಾಕರಿಸಿದ್ದಾರೆ.
ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ 2 (KP2) (Kirik Part 2) ಸಿನಿಮಾದ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ವಿಭಿನ್ನ ಪ್ಲ್ಯಾನ್ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.