spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟಿ20 ವಿಶ್ವಕಪ್ ನಂತರ ಕೋಚ್ ಹುದ್ದೆ ತೊರೆಯಲಿದ್ದಾರಾ ರವಿಶಾಸ್ತ್ರಿ?

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮುಂಬರುವ ಟಿ20 ವಿಶ್ವಕಪ್ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ  ತೊರೆಯುವ ಬಗ್ಗೆ ರವಿಶಾಸ್ತ್ರಿ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಬಯಸಿದ್ದೆಲ್ಲವನ್ನೂ ಸಾಧಿಸಿದ್ದೇನೆ. ಲಭಿಸಿರುವ ಸ್ವಾಗತವನ್ನು ಮೀರಿ ತಂಗಬಾರದು. ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವು. ನನ್ನ ಕಟ್ಟಕಡೆಯ ಗುರಿಯಾಗಿತ್ತು. ಅದನ್ನು ಸಾಧಿಸಿಯಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ವಿಶ್ವದ ಎಲ್ಲ ತಂಡಗಳನ್ನೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅವರದೇ ನೆಲದಲ್ಲಿ ಮಣಿಸಿದ್ದೇವೆ. ಟಿ20 ವಿಶ್ವಕಪ್ ಗೆದ್ದರೆ ಇನ್ನೂ ಸಂಭ್ರಮ. ಇದಕ್ಕಿಂತ ಹೆಚ್ಚಿನದೇನೂ ಅಪೇಕ್ಷೆಯಿಲ್ಲ ಎಂದು  ರವಿಶಾಸ್ತ್ರಿ ಹೇಳಿರುವುದಾಗಿ ಹೇಳಿಕೆಯನ್ನು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಟೀಮ್ ಇಂಡಿಯಾ ನನ್ನಿಂದ ಏನನ್ನು ಅಪೇಕ್ಷಿಸಿತ್ತೋ ಅದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ಧೇನೆ. . ಆಸ್ಟ್ರೇಲಿಯಾ ವಿರುದ್ಧ ಗೆಲುವು, ಕೋವಿಡ್ ಸಮಯದಲ್ಲಿಯೂ ಇಂಗ್ಲೆಂಡ್‌ನಲ್ಲಿ ಗೆಲುವು. ಇವೆಲ್ಲವೂ ನನ್ನ ಕ್ರಿಕೆಟ್ ಜೀವನದಲ್ಲಿ ಅತ್ಯಂತ ಸಂತೃಪ್ತಿದಾಯಕ ಕ್ಷಣವಾಗಿದೆ ಎಂದು ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss