ಸಹನಟನ ಕೆನ್ನೆಗೆ ಬಾರಿಸಿದ್ದ ಪ್ರಕರಣ; ಅಸ್ಕರ್‌ ಪ್ರಶಸ್ತಿ ಸಮಾರಂಭಗಳಿಂದ ವಿಲ್‌ ಸ್ಮಿತ್‌ 10 ವರ್ಷ ಬ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದ ಲಾಸ್ ಏಂಜಲೀಸ್‌ ನಲ್ಲಿ ನಡೆದ ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್‍ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿ ವಿವಾದ ಸೃಷ್ಟಿಸಿದ್ದ ವಿಲ್ ಸ್ಮಿತ್ ಅವರನ್ನು ಆಸ್ಕರ್‌ ಪ್ರಶಸ್ತಿ ಸಮಾರಂಭಗಳಿಂದ ನಿಷೇಧಿಸಲಾಗಿದೆ.
ವಿಲ್ ಸ್ಮಿತ್‌ ನಡವಳಿಕೆ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲು ಅಸ್ಕರ್‌ ಆಡಳಿತ ಮಂಡಳಿಯ ಸಭೆ ನಡೆಸಿದ ಬಳಿಕ ಹಾಲಿವುಡ್ ಫಿಲ್ಮ್ ಅಕಾಡೆಮಿಯು ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಸ್ಮಿತ್‌ ರನ್ನು 10 ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಿಂದ ನಿಷೇಧಿಸಿದೆ.
ಏಪ್ರಿಲ್ 8 ರಿಂದಲೇ ಅನ್ವಯವಾಗುವಂತೆ ಹತ್ತು ವರ್ಷ ಅವಧಿಗೆ ಅಸ್ಕರ್‌ ಇವೆಂಟ್‌ ಗಳಿಂದ ವಿಲ್​ಸ್ಮಿತ್ ರನ್ನು ಬ್ಯಾನ್‌ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರಿಗೆ ಅವಕಾಶವಿಲ್ಲ ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಮಾಹಿತಿ ನೀಡಿದ್ದಾರೆ.
ʼಆಸ್ಕರ್ ಪ್ರಶಸ್ತಿ ಸಮಾರಂಭವು ಸಿನಿಮಾ ರಂಗದಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳ ಸಂಭ್ರಮದ ಕ್ಷಣವಾಗಿತ್ತು. ಅಂತಹ ಕ್ಷಣಗಳನ್ನು ಹಾಳುಮಾಡಿದ ಸ್ಮಿತ್ ಅವರ ವರ್ತನೆಯು ಸ್ವೀಕಾರರ್ಹವಲ್ಲ’ ಎಂದು ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ. ‘ಕಿಂಗ್ ರಿಚರ್ಡ್ಸ್’ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಈ ಬಾರಿ “ಅತ್ಯುತ್ತಮ ನಟʼ ವಿಭಾಗದಲ್ಲಿ ಅಸ್ಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!