ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕಳೆದ ಎರಡು ವಾರಗಳಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್’ನಿಂದ ದೂರ ಉಳಿದಿದ್ದರು. ಸುದೀಪ್ ಮುಖ ನೋಡೋಕಾಗದೇ ಬಿಗ್ ಬಾಸ್ ಕಂಟೆಸ್ಟೆಂಟ್ಸ್ ಬೇಜಾರಾಗಿದ್ದರು. ಆದರೆ ಈ ವಾರ ಸುದೀಪ್ ಬಿಗ್ಬಾಸ್’ಗೆ ಬರುವುದು ದೃಢವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ನನ್ನ ಆರೋಗ್ಯ ಸುಧಾರಿಸಿದೆ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಈ ವಾರ ಬಿಗ್ ಬಾಸ್ ಶೋಗೆ ಬರಲಿದ್ದೇನೆ ಎಂದು ತಿಳಿಸಿದ್ದಾರೆ.
ಹಾಗೆಯೇ ತನಗೆ ಚಿಕಿತ್ಸೆ ನೀಡುತ್ತಿರುವ ಡಾ. ವೆಂಕಟೇಶ್ ಮತ್ತು ಡಾ. ವಿನಯ್ಗೆ ಧನ್ಯವಾದ ತಿಳಿಸಿದ್ದಾರೆ. ದೇಗುಲಗಳಲ್ಲಿ ನನಗಾಗಿ ಪ್ರಾರ್ಥನೆ ಮಾಡಿದ ಅನೇಕ ವಿಡಿಯೋಗಳನ್ನು ನೋಡಿದ್ದೇನೆ. ನಿಮಗೆಲ್ಲರಿಗೂ ಲವ್ ಯು ಅಷ್ಟೇ ಹೇಳಲು ನನ್ನಿಂದ ಸಾಧ್ಯ ಎಂದು ಸುದೀಪ್ ಬರೆದುಕೊಂಡಿದ್ದಾರೆ.
Thanks for the prayers and wshs,,I'm better now n looking forward to attend BB this week. Many thanks to Dr.Venkatesh n Dr.Vinay for having taken so mch care.
Received many videos frm temples where prayers were being offered fo my health. I can only say "luv you all"
🙏🏼🙏🏼🙏🏼— Kichcha Sudeepa (@KicchaSudeep) April 29, 2021