ಗೆದ್ದರೆ, ಭಾರತ-ಯುಎಸ್ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವೆ: ಟ್ರಂಪ್

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2024ಕ್ಕೆ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಫ್ಲೋರಿಡಾದಲ್ಲಿರುವ ತಮ್ಮ ರೆಸಾರ್ಟ್‌ನಲ್ಲಿ ರಿಪಬ್ಲಿಕನ್ ಹಿಂದೂ ವಿಂಗ್ (ಆರ್‌ಎಚ್‌ಎಸ್) 200 ಭಾರತೀಯ-ಅಮೆರಿಕನ್ನರೊಂದಿಗೆ ಆಯೋಜಿಸಿದ್ದ ದೀಪಾವಳಿ ಔತಣಕೂಟದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಟ್ರಂಪ್ ಮಾತನಾಡಿದರು.

ಹಿಂದೂಗಳು, ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ಟ್ರಂಪ್ ಹೇಳಿಕೊಂಡರು. 2024ರ ಚುನಾವಣೆಯಲ್ಲಿ ಗೆದ್ದರೆ ಆರ್‌ಎಚ್‌ಎಸ್ ಸಂಸ್ಥಾಪಕ ಶಲಭ್ ಕುಮಾರ್ ಅವರನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತ ಗೆಲ್ಲುವುದಾಗಿ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ-ಅಮೆರಿಕನ್ ಸಮುದಾಯದ ಉನ್ನತಿಗೆ ಹಲವಾರು ಯೋಜನೆಗಳನ್ನು ಹೊಂದಿದ್ದು, 2016ರ ಚುನಾವಣೆಯಲ್ಲಿ ಹಲವು ಕಡೆ ಹಿಂದೂಗಳ ಬೆಂಬಲವಿಲ್ಲದೇ ಗೆಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!