ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ರ ಪುತ್ರ ಝೈದ್ ಖಾನ್ ಅವರ ಮೊದಲ ಚಿತ್ರ ಬಿಡುಗಡೆಗೂ ಮುನ್ನ ಎರಡನೇ ಚಿತ್ರದ ತಯಾರಿ ನಡೆಯುತ್ತಿದೆ.
ಮೊದಲ ಚಿತ್ರ ಬನಾರಸ್ ನ ಬಿಡುಗಡೆಗೂ ಮುನ್ನವೇ ಮತ್ತೊಂದು ಚಿತ್ರದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಝೈದ್ ಖಾನ್ ರ ಎರಡನೇ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ ಅನ್ನುವ ಮಾಹಿತಿ ಕೇಳಿಬರುತ್ತಿದೆ.
ಬನಾರಸ್ ಚಿತ್ರದ ಪ್ರೊಮೋಷನ್ ಬಗ್ಗೆ ಮಾತನಾಡುವಾಗ ಝೈದ್ ಅವರಿಗೆ ಸಿನಿಮಾ ಮಾಡುವ ಬಗ್ಗೆ ಪ್ಲಾನ್ ಇದೆ ಎಂದಿದ್ದಾರಂತೆ.
ಬನಾರಸ್ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಅನ್ನು ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಎದುರು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರಕ್ಕೆ ಸೋನಾಲ್ ಮೊಂತೆರೋ ಅವರು ನಾಯಕಿಯಾಗಿದ್ದಾರೆ.