Friday, August 19, 2022

Latest Posts

ವಿಶ್ವದ ಬೇರೆ ಉಗ್ರರಿಗೆ ಪ್ರೇರಣೆಯಾಗಲಿದೆಯಾ ತಾಲಿಬಾನ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ರೀತಿ ವಿಶ್ವದಲ್ಲಿರುವ ಬೇರೆ ಭಯೋತ್ಪಾದಕರಿಗೆ ಧೈರ್ಯ ತುಂಬುವ ಸಾಧ್ಯತೆ ಇದೆ ಎಂದು ಬ್ರಿಟನ್ ಗುಪ್ತಚರ ಇಲಾಖೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಈ ಬಗ್ಗೆ ಬ್ರಿಟನ್‌ನ ಭದ್ರತಾ ಸೇವೆ-ಎಂ 15 ನ ಮಹಾನಿರ್ದೇಶಕ ಕೆನ್ ಮೆಕಲಮ್, ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಿಂದ ಹೊರನಡೆದ ನಂತರ, ಅಲ್ಲಿ ನಡೆದ ಘಟನೆಗಳು, ಬೆಳವಣಿಗೆಗಳು ಭಯೋತ್ಪಾದಕರಿಗೆ ಮನೋಸ್ಥೈರ್ಯ ಹೆಚ್ಚಿಸುವ ಸಾಧ್ಯತೆ ಇದೆ. ಅತಿ ಹೆಚ್ಚು ಜಾಗರೂಕತೆ ವಹಿಸುವ ಅವಶ್ಯ ಇದೆ ಎಂದಿದ್ದಾರೆ.
ಇದೀಗ ಭಯೋತ್ಪಾದಕರಿಗೆ ಗೆಲುವು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬೇರೆ ಯೋಜನೆ ಹಾಕುತ್ತಾರೆ. ಕಾರ್ಯವೈಖರಿಯಲ್ಲಿ ಅಭಿವೃದ್ಧಿಯಾಗಬಹುದು. ಅತ್ಯಾಧುನಿಕ ಮಾದರಿಯಲ್ಲಿ ಅವರು ನಮ್ಮನ್ನು ಎದುರಾಗಬಹುದು ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!