Sunday, April 18, 2021

Latest Posts

ಜಾಸ್ತಿ ಹೆಲ್ಮೆಟ್ ಹಾಕೋದ್ರಿಂದ ಕೂದಲು ಉದುರುತ್ತಾ?

ಬಾಚಣಿಗೆಯಲ್ಲಿ ನಾಲ್ಕು ಕೂದಲು ಕಾಣಿಸಿಬಿಟ್ಟರೆ ಏನು ಸಮಸ್ಯೆಯಿಲ್ಲ. ಆದರೆ ದಿಂಬು, ನೆಲ, ಅಡುಗೆಯಲ್ಲಿಯೂ ಕೂದಲು ಕಾಣಿಸಿದರೆ ಭಯಂಕರ ನೋವು.. ಊಟದಲ್ಲಿ ಕೂದಲು ಸಿಕ್ಕವರ ಬಳಿ ಬೈಗುಳ ಬೇರೆ ಕೇಳಬೇಕು.
ಹೇರ್ ಶಾಂಪೂ ಬದಲಾಯಿಸಿಲ್ಲ, ಎಣ್ಣೆ ವಾರಕ್ಕೆರಡು ಬಾರಿ ಹಚ್ಚಿದ್ದೇನೆ. ಗೀಸರ್ ನೀರಿನಲ್ಲೂ ಸ್ನಾನ ಮಾಡೋದಿಲ್ಲ ಆದರೂ ಕೂದಲು ಉದುರೋದು ಯಾಕೆ?
ತಕ್ಷಣ ಅಮ್ಮ ಅಂದ್ರು ದಿನಾ ಹೆಲ್ಮೆಟ್ ಹಾಕ್ಕೊಂಡ್ ಆಫೀಸ್‌ಗೆ ಹೋಗ್ತ್ಯಲಾ, ಹೆಲ್ಮೆಟ್ ಹಾಕಿದ್ರೆ ಬೋಡಿ ಆಗ್ತ್ಯ!
ಇದೆಲ್ಲಾ ಒಂದು ಕ್ಷಣ ನಿಜ ಅನಿಸಿಬಿಡ್ತು. ಆದರೆ ಹೆಲ್ಮೆಟ್ ಹಾಕೋದ್ರಿಂದ ಕೂದಲು ಉದುರೋದಿಲ್ಲ. ಬದಲಿಗೆ ಅತೀ ಹೆಚ್ಚು ಹೊಟ್ಟು ಆಗುತ್ತದೆ. ಜೊತೆಗೆ ತಲೆಯಿಂದ ಬೆವರು ಹೆಚ್ಚು ಸುರಿದು ತುರಿಕೆ ಕೂಡ ಆಗುತ್ತದೆ. ಹೈಜಿನ್ ಮೇಂಟೇನ್ ಮಾಡದಿದ್ರೆ ಕೂದಲು ಉದುರಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss