ಒಂದೂರಿನಲ್ಲಿ ಒಬ್ಬ ರಾಜನಿದ್ದನಂತೆ. ಅರಮನೆಯಲ್ಲೇ ಇದ್ದು ಬೋರಾಗಿ ಆತ ಕುದುರೆ ತೆಗೆದುಕೊಂಡು ರೌಂಡ್ಸ್‌ಗೆ ಹೋಗಿದ್ದನಂತೆ. ತನ್ನೂರಿನ ಪ್ರಜೆಗಳ ಬಗ್ಗೆ ಸ್ವಲ್ಪ ತಿಳ್ಕೋಳೋಣ ಎನ್ನುವ ಆಸೆ ಆಗಿ, ರಸ್ತೆ ಮಧ್ಯೆ ಒಂದು ದೊಡ್ಡ ಕಲ್ಲನ್ನು ಇಟ್ಟನಂತೆ.
ಕಲ್ಲನ್ನು ಇಟ್ಟು ರಾಜ ಬಚ್ಚಿಟ್ಟುಕೊಂಡ. ಯಾರು ಆ ಕಲ್ಲನ್ನು ತೆಗೆದು ಇತರರಿಗೂ ಸಹಾಯ ಮಾಡ್ತಾರೆ ಅನ್ನೋದು ರಾಜನ ಕುತೂಹಲ ಆಗಿತ್ತು. ತನ್ನ ಅರಮನೆಯ ಸಿಬ್ಬಂದಿ, ಮಂತ್ರಿ ಇನ್ಯಾರಾದರೂ ಅದನ್ನು ತೆಗೆಯುತ್ತಾರೆ ಅನ್ನೋದು ರಾಜನ ನಂಬಿಕೆಯಾಗಿತ್ತು.
ಕೆಲವೇ ಸಮಯದಲ್ಲಿ ಅರಮನೆಯ ಸಿಬ್ಬಂದಿ ಹಾಗೂ ಮಂತ್ರಿಗಳ ಗುಂಪು ಅಲ್ಲಿಗೆ ಬಂತು. ಕಲ್ಲನ್ನು ನೋಡಿ” ಯಾರೋ ಮೂರ್ಖ ರಸ್ತೆ ಮಧ್ಯೆ ಕಲ್ಲಿಟ್ಟಿದ್ದಾನೆ” ಎಂದು ಬೈಯುತ್ತಾ, ಕಲ್ಲಿನ ಸೈಡ್‌ನಿಂದ ನಡೆದುಕೊಂಡು ಹೋದರು.
ಇದನ್ನು ನೋಡಿ ರಾಜನಿಗೆ ಕೋಪ+ ನಿರಾಸೆ ಕೂಡ ಆಯ್ತು. ನಂತರ ಮತ್ತೆ ಮರೆಯಲ್ಲೇ ನೋಡುತ್ತಾ ನಿಂತಿದ್ದಾಗ ತರಕಾರಿ ಗಾಡಿ ಜೊತೆಗೆ ಬಂದ ಬಡವನೊಬ್ಬ ಕಾಣಿಸಿದ. ಬರೀ ಕೈ ಬೀಸಿಕೊಂಡು ಬಂದ ಅರಮನೆ ಸಿಬ್ಬಂದಿಯೇ ಕೆಲಸ ಮಾಡಿಲ್ಲ. ಇನ್ನು ಕೈ ತುಂಬಿರುವ ಈ ಬಡವ ಪಾಪ ಏನು ಮಾಡಿಯಾನು ಎಂದು ರಾಜ ಸುಮ್ಮನಾದ.
ಕಲ್ಲನ್ನು ನೋಡಿದ ಬಡವ” ಇದ್ಯಾರು ಸ್ವಾಮಿ, ಈ ರೀತಿ ರಸ್ತೆ ಮಧ್ಯ ದೊಡ್ಡ ಕಲ್ಲು ಇಟ್ಟು ಹೋಗಿದ್ದಾರೆ, ಓಡಾಡುವವರಿಗೆ ತೊಂದರೆ ಆಗೋದಿಲ್ವೆ?” ಎಂದುಕೊಂಡ. ನಂತರ ತನ್ನ ಗಾಡಿಯನ್ನು ಇಳಿಸಿ, ತುಂಬಾ ಕಷ್ಟಪಟ್ಟು ತನ್ನೆಲ್ಲ ಶಕ್ತಿಯನ್ನು ಹಾಕಿ ಕಲ್ಲನ್ನು ಎಳೆದ.
ಕಲ್ಲಿನ ಅಡಿ ಒಂದು ಸಣ್ಣ ಚೀಲ ಹಾಗೂ ಚೀಟಿ ಇತ್ತು. ಮೊದಲು ಚೀಲವನ್ನು ಓಪನ್ ಮಾಡಿ ನೋಡಿದ. ಫುಲ್ ಚಿನ್ನದ ನಾಣ್ಯಗಳಿತ್ತು. ತಕ್ಷಣ ಚೀಟಿ ತೆಗೆದು ನೋಡಿದ. ಅದರಲ್ಲಿ ಕಷ್ಟಪಟ್ಟು ಇತರರಿಗೆ ಸಹಾಯ ಮಾಡಿದವರಿಗಾಗಿ ರಾಜನ ಕಡೆಯಿಂದ ಈ ಉಡುಗೊರೆ ಎಂದು ಬರೆದಿತ್ತು.
ನಮ್ಮ ಕೆಲಸ ನಾವು ಯಾವಾಗ್ಲೂ ಮಾಡ್ಕೋತಿವಿ. ಕೆಲವರು ತಮ್ಮ ಕೆಲಸವನ್ನೂ ಇತರರಿಂದ ಮಾಡಿಸಿಕೊಳ್ತಾರೆ. ಬಟ್ ಒಮ್ಮೆಯಾದ್ರೂ ಇನ್ನೊಬ್ಬರ ಕೆಲಸ ಮಾಡಿ ನೋಡಿ. ಅದರಲ್ಲಿ ಸಿಗುವ ಸಂತೃಪ್ತಿಯೇ ಬೇರೆ. ರಿವಾರ್ಡ್‌ಗಾಗಿ ಮಾಡಬೇಡಿ. ಆದರೆ ಸುಖ ನಿಮ್ಮನ್ನು ಅರಸಿ ಬರುತ್ತದೆ.