ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದಲ್ಲಿ ದೇವೇಗೌಡರು ಸಿದ್ದರಾಮಯ್ಯನ ಗರ್ವಭಂಗ ಮಾಡ್ತೀನಿ ಅಂದ್ರು. ನೀವೆಲ್ಲ ನನ್ನ ಗರ್ವಭಂಗ ಮಾಡೋಕೆ ಬಿಡ್ತೀರಾ? ಅಂತ ನೆರೆದಿದ್ದ ಅಭಿಮಾನಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಜನಕಲ್ಯಾಣ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ದೊಡ್ಡ ಸಮಾವೇಶ ಆಗಿಲ್ಲ. ಹಾಸನದಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ನಡೆದಿರಲಿಲ್ಲ. ಇಂತಹ ಸಮಾವೇಶವನ್ನ ನಾನು ಮರೆಯಲು ಸಾಧ್ಯವಿಲ್ಲ. ಇದು ಅವಿಸ್ಮರಣೀಯ.
ಹಾಸನದಲ್ಲಿ ಸಮಾವೇಶ ಮಾಡಲು ಈ ಭಾಗದ ಎಲ್ಲಾ ಸಚಿವರು ಸಲಹೆ ಕೊಟ್ಟರು. ʻನಮಗೆ ಮತದಾರರೇ ದೇವರುʼ ಎಂದು ಹೇಳಿದರು.