ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಂಬಲ್ಡನ್ ಮಹಿಳೆಯರ ಡಬಲ್ಸ್ನಲ್ಲಿ ಮೊದಲ ಸುತ್ತಿನಲ್ಲಿ ಜಯ ಗಳಿಸಿದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಸಹಆಟಗಾರ್ತಿ ಮತ್ತು ಮಗನ ಜೊತೆ ಫೋಟೊಗೆ ಪೋಸ್ ಕೊಟ್ಟು ಸಂಭ್ರಮಿಸಿದರು.
ತಮ್ಮ ಮಗನನ್ನು ಸ್ಪೈಡರ್ಮ್ಯಾನ್ ಎಂದು ಕರೆದಿರುವ ಮಿರ್ಜಾ, ನಮ್ಮನ್ನು ಪ್ರೋತ್ಸಾಹಿಸುತ್ತಿರುವುದಾಗಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಅವರ ಜೊತೆ ಮೊದಲ ಸುತ್ತಿನಲ್ಲಿ ಗುರುವಾರ ಡೆಸಿರೆ ಕ್ರಾವ್ಜಿಕ್ ಮತ್ತು ಅಲೆಕ್ಸಾ ಗುವಾರಚಿ ಜೋಡಿಯನ್ನು ಮಣಿಸಿದರು.7-5. 6-3 ನೇರ ಸೆಟ್ಗಳಿಂದ ಅಲೆಕ್ಸಾ-ಡೆಸಿರೆ ಜೋಡಿಯನ್ನು ಸೋಲಿಸಿದ ಸಾನಿಯಾ-ಬೆಥನಿ ಜೋಡಿ ಎರಡನೇ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.
ಪಂದ್ಯದುದ್ದಕ್ಕೂ ಸಾನಿಯಾರ ಮಗ ಈಝಾನ್ ಮಿರ್ಜಾ ಮಲ್ಲಿಕ್ ಗಮನ ಸೆಳೆದಿದ್ದು , ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಸಾನಿಯಾ ಮಗನ ಜೊತೆಗೆ ಫೋಟೊಗೆ ಪೋಸ್ ನೀಡಿ ಸಂಭ್ರಮಿಸಿದರು.