ಹೊಸದಿಗಂತ ವರದಿ, ಅಂಕೋಲಾ:
ನಾಮಧಾರಿ ಸಮಾಜದ ವೈಶಿಷ್ಟ್ಯಪೂರ್ಣ ದಹಿಂಕಾಲ ಉತ್ಸವ ಕಾರ್ಯಕ್ರಮ ಬುಧವಾರ ಸಂಜೆ ಹಲವಾರು ವಿಶೇಷತೆಗಳೊಂದಿಗೆ ನಡೆಯಿತು.
ಉತ್ಸವದ ಅಂಗವಾಗಿ ತಾಲೂಕಿನ ದೊಡ್ಡ ದೇವರು ಎಂದು ಖ್ಯಾತಿ ಪಡೆದಿರುವ ಶ್ರೀ ವೆಂಕಟರಮಣ ದೇವರು ಮತ್ತು ಶ್ರೀ ಶಾಂತಾದುರ್ಗಾ ದೇವಿಯ ರಥೋತ್ಸವ ಭವ್ಯ ಮೆರವಣಿಗೆಯಲ್ಲಿ ವೆಂಕಟರಮಣ ದೇವಾಲಯದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಬಂಡಿಬಜಾರದ ಆಡುಕಟ್ಟೆಯ ಹತ್ತಿರ ಕುಳಿತು ಅಲ್ಲಿ ವಿವಿಧ ಪೂಜಾ ವಿಧಿಗಳನ್ನು ನಡೆಸಲಾಯಿತು.
ಮೆರವಣಿಗೆಯಲ್ಲಿ ಮಂಗಳೂರು ಪುರವಂತಿಕೆ ದೃಶ್ಯ, ತಟ್ಟೀರಾಯ ಗೊಂಬೆ ಕುಣಿತ, ಹುಲಿ ವೇಷ,ಸಿದ್ಧಿ ಡಮಾಮಿ ಕುಣಿತ, ಸಾಗರದ ಡೊಳ್ಳು ಕುಣಿತ, ಮಂಡ್ಯದ ಪೂಜಾ ಕುಣಿತ, ತಿರುಪತಿ ಶ್ರೀನಿವಾಸ ರಥ,ಅವರ್ಸಾ, ಕೋಡಕಣಿ, ಅಂಕೋಲಾದ ಟ್ಯಾಬ್ಲೋಗಳು ಗಮನ ಸೆಳೆದವು.
ಉತ್ತರ ಕನ್ನಡ ಜಿಲ್ಲೆಯ ನುರಿತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಉತ್ಸವ ಸಮಿತಿಯ ಪದಾಧಿಕಾರಿಗಳು,ನಾಮಧಾರಿ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.