Thursday, February 25, 2021

Latest Posts

ಎಂಜಿನ್‌ ದೋಷಕ್ಕೆ ಒಳಗಾಗಿ, ಬಿಡಿ ಭಾಗ ಬೀಳಿಸಿಕೊಂಡರೂ ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನ: ಇಲ್ಲಿದೆ ವೈರಲ್ ವಿಡಿಯೋ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಡೆನ್ವರ್‌ನಿಂದ ಹೊನೊಲುಲುಗೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ ಎಂಜಿನ್‌ ದೋಷಕ್ಕೆ ಒಳಗಾಗಿ, ಬಿಡಿ ಭಾಗಗಳನ್ನು ಬೀಳಿಸಿಕೊಂಡಿದ್ದರೂ ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ ಅಚ್ಚರಿ ಮೂಡಿಸಿದೆ.

ಬೋಯಿಂಗ್ 777-200- ಯುಎ328 ಸಂಖ್ಯೆಯ ವಿಮಾನವು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಸ್ಥಳೀಯ ಕಾಲಮಾನ ಮಧ್ಯಾಹ್ನ 12: 15ರಲ್ಲಿ ಹೊನೊಲುಲುಗೆ ಹಾರಾಟ ನಡೆಸುತ್ತಿತ್ತು. ವಿಮಾನ ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಬಲ-ಎಂಜಿನ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದನ್ನು ಪೈಲಟ್ ಗಮನಿಸಿ, ಕೂಡಲೇ ಏರ್ ಟ್ರಾಫಿಕ್ ಕಂಟೋಲ್ ರೂಂಗೆ ಮಾಹಿತಿ ನೀಡಿದ್ದರೆ.

ಬಳಿಕ ವಿಮಾನವನ್ನು ಮರಳಿ ಏರ್ ಪೋರ್ಟ್ ಗೆ ತಿರುಗಿಸಿದ್ದಾರೆ. ಈ ವೇಳೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಂಜಿನ್ ಗೆ ಅಳವಡಿಸಲಾಗಿದ್ದ ರಕ್ಷಣಾ ಕವಚ ಕೂಡ ಉದುರಿ ಕೆಳಗೆ ಮನೆಯೊಂದರ ಆವರಣದಲ್ಲಿ ಬಿದ್ದಿದೆ. ಅದಾಗ್ಯೂ ವಿಮಾನ ಸುರಕ್ಷಿತವಾಗಿ ಡೆನ್ವರ್ ವಿಮಾನ ನಿಲ್ದಾಣ ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಅಮೆರಿಕದ ವಾಯುಯಾನ ಇಲಾಖೆ ತಿಳಿಸಿದೆ.

ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. 241 ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ,’ ಎಂದು ಯುನೈಟೆಡ್‌ ಏರ್‌ಲೈನ್ಸ್‌ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ಬೆಂಕಿ ತಗುಲಿದ್ದನ್ನು ವಿಮಾನದಲ್ಲಿದ್ದವರು  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!