Monday, August 15, 2022

Latest Posts

ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ: ಮಹಿಳಾ ಪೊಲೀಸ್ ಕಾನ್​​ಸ್ಟೆಬಲ್​ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಹಿಳಾ ಪೊಲೀಸ್ ಕಾನ್​​ಸ್ಟೆಬಲ್​ವೋರ್ವರು ಮಗುವಿನೊಂದಿಗೆ ಕರ್ತವ್ಯ ನಿರ್ಹಹಣೆ ಮಾಡಿರುವ ಹಿನ್ನೆಲೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ತನಿಖೆಗೊಳಪಡಲಿದ್ದಾರೆ.
ಚಂಡೀಗಢ ಸಂಚಾರಿ ಪೊಲೀಸ್ ಕಾನ್ಸ್​​​ಟೇಬಲ್​​ ಪ್ರಿಯಾಂಕಾ ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಆಕೆಯ ವಿರುದ್ಧ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಸೆಕ್ಟರ್​​ 15-16-23-24 ಚೌಕ್ ಬಳಿ ಬೆಳಗ್ಗೆ ಮಹಿಳಾ ಕಾನ್​​ಸ್ಟೆಬಲ್ ಪ್ರಿಯಾಂಕಾ ಕರ್ತವ್ಯದಲ್ಲಿರುವುದು ಕಂಡು ಬಂದಿರಲಿಲ್ಲ. ಈ ವೇಳೆ, ಇನ್ಸ್​​ಪೆಕ್ಟರ್​ ಪ್ರಶ್ನೆ ಮಾಡಿದಾಗ ಆಕೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು. ಬಳಿಕ ತಡವಾಗಿ ಸ್ಥಳಕ್ಕಾಗಮಿಸಿದ ಪ್ರಿಯಾಂಕಾ ಮಗು ಹೊತ್ತುಕೊಂಡು ಕರ್ತವ್ಯ ನಿರ್ವಹಣೆ ಮಾಡಿದ್ದರು. ಆದರೆ, ಈ ಹಿಂದೆ ಆಕೆ ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ ಮಾಡುವುದಕ್ಕೆ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅವರ ಆದೇಶ ಕಡೆಗಣಿಸಿ ಮಹಿಳಾ ಕಾನ್ಸ್​ಟೇಬಲ್​​ ಕರ್ತವ್ಯ ನಿರ್ವಹಣೆ ಮಾಡಿದ್ದು, ಹೀಗಾಗಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss